ಚಿಕ್ಕಬಳ್ಳಾಪುರ: ತನ್ನ ಪ್ರಾಣಸ್ನೇಹಿತನ ಕತ್ತುಕೊಯ್ದ ಕಿರಾತಕ ಸ್ನೇಹಿತ ರಕ್ತ ಕುಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ದೃಶ್ಯ ನೋಡಿದ ಸ್ಥಳೀಯರು ಭಯಭೀತರಾಗಿದ್ದಾರೆ.
ಚಿಂತಾಮಣಿಯ ಸಿದ್ದೇಪಲ್ಲಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್ ಮತ್ತು ಮಾರೇಶ್ ಪ್ರಾಣ ಸ್ನೇಹಿತರಾಗಿದ್ದರು, ಇಬ್ಬರು ಜತೆಯಲ್ಲಿಯೇ ಬಟ್ಟೆ ವ್ಯಾಪಾರ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾರೇಶ್, ವಿಜಯ್ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕಾಗಿ ಈ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮಾರೇಶ್ ನನ್ನು ಪಾರ್ಟಿ ಮಾಡೋಣ ಎಂದು ಕರೆದು ಸಸಿದ್ದೇಪಲ್ಲಿ ಕ್ರಾಸ್ ನಲ್ಲಿ ಕೊಲೆ ಮಾಡಿದ್ದಾನೆ.
ಚಿಂತಾಮಣಿಯ ಗಾಂಧಿನಗರದ ವಿಜಯ್ ಎಂಬಾತ ಚೇಳೂರು ತಾಲ್ಲೂಕಿನ ಮಂಡಪಲ್ಲಿಯ ಮಾರೇಶ್ ಎಂಬುವವರ ಕತ್ತನ್ನು ಕೊಯ್ದು ರಕ್ತ ಕುಡಿದಿದ್ದಾನೆ. ರಕ್ತ ಕುಡಿಯುವ ವಿಡಿಯೋವನ್ನು ವಿಜಯ್ ಮಾಡಿಸಿದ್ದಾನೆ. ಸದ್ಯ ವಿಜಯ್ ನನ್ನು ಕೆಂಚಾರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.




