GUARANTEE PROGRAMMES NOT STOP: ಕೇಂದ್ರ ಸರ್ಕಾರ ಎಷ್ಟು ತೊಂದರೆ ಕೊಟ್ಟರು ನಮ್ಮ ಯೋಜನೆ ಅನುಷ್ಠಾನ ಖಚಿತ: ಎಂ.ಬಿ.ಪಾಟೀಲ

ಹುಬ್ಬಳ್ಳಿ: ನಮ್ಮ ಸರ್ಕಾರ ಕೊಟ್ಟ ಮಾತನ್ನು ತಪ್ಪಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೆವೆ. ಎಲ್ಲಾ ಗ್ಯಾರಂಟಿ ಸ್ಕೀಮ್‌ಗಳನ್ನು ಅನುಷ್ಠಾನ ಮಾಡುತ್ತೇವೆ. ಕೇಂದ್ರದವರು ಎಷ್ಟೇ ತೊಂದರೆ ಕೊಟ್ಟರು ನಾವು ಅಕ್ಕಿ ಕೊಟ್ಟೆ ಕೊಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮ ಯೋಜನೆಗೆ ಏನೇ ಅಡ್ಡಗಾಲು ಹಾಕಿದರೂ ಕೂಡ ನಾವು ಯೋಜನೆ ಅನುಷ್ಠಾನ ಮಾಡಿಯೇ ಮಾಡುತ್ತೇವೆ ಎಂದರು.

ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 17 ಜ‌ನ ಬಿಜೆಪಿ ಸೇರಿದವರು ಉತ್ತರ ಕೊಡಲಿ. ಮುನಿರತ್ನ, ಸುಧಾಕರ, ಎಮ್‌‌ಟಿಬಿ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್ ಉತ್ತರ ನೀಡಲಿ. ಅವರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತೆ ಇಲ್ಲ ಎಂದು ಅವರು ಹೇಳಿದರು.
ಚಕ್ರವರ್ತಿ ಸೂಲಿಬೆಲೆ ಶಿವಾಜಿ, ಸಾವರ್ಕರ್ ವಂಶಸ್ಥರು ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾವು ಬಸವಣ್ಣನವರ ವಂಶಸ್ಥರೆಂದು ಎಂ.ಬಿ.ಪಾಟೀಲ್ ಪ್ರತ್ಯುತ್ತರ ನೀಡಿದರು.
ವಿದ್ಯುತ್ ದರ ಏರಿಕೆ ಮಾಡಿದ್ದು ನಮ್ಮ ಸರ್ಕಾರ ಅಲ್ಲ. ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮಾಡಿದೆ. ಕೆಇಆರ್‌ಸಿ ತೆಗೆದುಕೊಂಡ ನಿರ್ಧಾರದಲ್ಲಿ ಕೆಲವು ಲೋಪಗಳಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

More News