Actor Asin Divorce: ನಟಿ ಆಸಿನ್ ಬದುಕಲ್ಲಿ ಬಿರುಗಾಳಿ..?: ಪತಿಯ ಪರಸಂಗದಿಂದ ಬೇಸತ್ತು ವಿಚ್ಚೇದನಕ್ಕೆ ನಿರ್ಧಾರ..?

ಇಷ್ಟದಂತೆ ಮದುವೆ.. ಪ್ರೀತಿಯ ಕಾಣಿಕೆಯಾಗಿ ಕೂಸು..
ಪುಟ್ಟ ಸಂಸಾರ.. ಖುಷಿಯ ಹೂರಣ.. ಇನ್ನೇನು ಬೇಕು..? ಸ್ವರ್ಗಕ್ಕೆ ಮೂರೇ ಗೇಣು ಎನ್ನುತ್ತಿದ್ದ ಬಹುಭಾಷಾ ನಟಿ ಆಸಿನ್ ಬದುಕಲ್ಲಿ ಬಿರುಗಾಳಿ ಎದ್ದಿದೆಯಂತೆ.. ಪತಿಯ ಪರಸಂಗದಿಂದ ಬೇಸತ್ತು ನಟಿ ವಿಚ್ಚೇದನ ಕ್ಕೆ ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಸಿನಿಮಾ ಇಂಡಸ್ಟ್ರಿ ಯಲ್ಲಿ ಬೇಡಿಕೆ ಇದ್ದಾಗಲೇ ನಟಿ ಆಸಿನ್ 2016ರಲ್ಲಿ ಉದ್ಯಮಿ ರಾಹುಲ್ ಶರ್ಮ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು..
ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ಕೊಡಬೇಕೆಂಬ ದೃಷ್ಟಿಯಿಂದ ನಟಿ ಆಸಿನ್ ಸಿನಿಮಾ ಕೆರಿಯರ್ ನ್ನೇ ತೊರೆದರು. ಬಳಿಕ ಒಂದಷ್ಟು ಸಮಯ ಪತಿಯ ಕಂಪನಿಯಲ್ಲೇ ಕೆಲಸವನ್ನೂ ಮಾಡಿದರು. ಪ್ರಾರಂಭದಲ್ಲಿ ಖುಷಿ ಖುಷಿಯಾಗಿ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಫೋಟೋ ಶೇರ್ ಮಾಡಿ ತಮ್ಮ ಸಂತಸ ಹಂಚಿಕೊಳ್ಳುತ್ತಿದ್ದ ನಟಿ ಬರು ಬರುತ್ತ ಸಾಮಾಜಿಕ ಜಾಲತಾಣದಿಂದ ದೂರಾದರು.. ಇದಕ್ಕೆ ವೈಯಕ್ತಿಕ ಬದುಕಿನಲ್ಲಿ ಎದ್ದ ಬಿರುಗಾಳಿಯೇ ಕಾರಣ ಎನ್ನಲಾಗಿದೆ.

ಪ್ರಾರಂಭದಲ್ಲಿ ಬಹಳ ಸಂತೋಷವಾಗಿದ್ದ ಜೋಡಿ ಮಧ್ಯೆ ಸಣ್ಣ ಪುಟ್ಟ ಮನಸ್ಥಾಪ ಬರಲು ಪ್ರಾರಂಭಿಸಿದೆಯಂತೆ. ಅದಕ್ಕೆ ಪತಿಯ ನಡವಳಿಕೆಯೇ ಕಾರಣ ಎನ್ನಲಾಗಿದೆ. ನಟಿ ಆಸಿನ್ ಗೆ ಮದುವೆಯಾಗಿ 5 ವರ್ಷ ವಯಸ್ಸಿನ ಮಗು ಇದೆ. ಮಗು ಇದ್ದಾಗಲೂ ಪತಿ ಬೇರೆಯೊಬ್ಬ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಪ್ರಾರಂಭದಲ್ಲಿ ಕುಟುಂಬ ಹಾಳಾಗುತ್ತೆ. ಹೀಗೆಲ್ಲಾ ಮಾಡ್ಬೇಡಿ ಎಂದು ತಿಳಿ ಹೇಳಿದರೂ ಪತಿಯ ಪರಸಂಗದ ಆಟ ಮುಂದುವರೆದ ಕಾರಣ ಬೇಸತ್ತು ವಿಚ್ಚೇದನ ಕ್ಕೆ ನಿರ್ಧಾರ ಮಾಡಿದ್ದಾರೆ ಎಂಬ ಊಹಾಪೋಗಳು ಸದ್ದು ಮಾಡ್ತಿದೆ.

More News