ಬೆಂಗಳೂರು: ಭಾಗ್ಯ ಹೆಸರಿಡಿದು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ಮುಂದಾಗಿರುವ ಬಿಜೆಪಿ ನಾಯಕರಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಪಡೆ ಪ್ರತಿಹಸ್ತ್ರ ಸಿದ್ದಪಡಿಸ್ತಿದೆ. ಭಾಗ್ಯಗಳ ಆಫರ್ ಜೊತೆಗೆ ಬಿಜೆಪಿ ಕಾಲಾವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಪಟ್ಟಿ ಹಿಡಿದು ಬಾಯಿ ಮುಚ್ಚಿಸುವ ತಂತ್ರಕ್ಕೆ ಕೈ ಹಾಕಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಟ್ ಕಾಯಿನ್ ಹಗರಣ, ಗುತ್ತಿಗೆದಾರರು ಆರೋಪಿಸಿದ 40% ಕಮಿಷನ್, ನೀರಾವರಿ ಇಲಾಖೆಯಲ್ಲಿ ನಡೆದ ಹಗರಣ, ಕೊರೊನಾ ವೈರಾಣು ದಾಳಿ ವೇಳೆ ನಡೆದ ಭ್ರಷ್ಟಾಚಾರ ದ ತನಿಖೆ ನಡೆಸಲು ಅಧಿಕಾರಿಗಳ ತಂಡವನ್ನು ರಚಿಸಲು ಸಿದ್ದತೆ ನಡೆಸಿದ್ದು, SIT ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ.
ಬಿಜೆಪಿ ಹಗರಣ ತನಿಖೆಗೆ ಕೊಡುವ ವಿಚಾರದ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹಳ ವಿಭಿನ್ನವಾಗಿ ಸ್ಕ್ಯಾಮ್ ಮಾಡಿದ್ದಾರೆ. ತಂತ್ರಜ್ಞಾನ ಸ್ಕ್ಯಾಮ್ ಆಗಿದೆ. ಎಕನಾಮಿಕ್ ನಲ್ಲೂ ಹಗರಣ ಆಗಿದೆ. ಕಳೆದ ಸಂಪುಟ ಸಭೆಯಲ್ಲಿ ಕೆಲವು ಚರ್ಚೆಯಾಗಿತ್ತು. ಸಿಎಂ,ಡಿಸಿಎಂ ಕೆಲವರ ಬಗ್ಗೆ ಚರ್ಚಿಸಿದ್ದರು. ಯಾವ ತಂಡಗಳನ್ನ ಮಾಡಬೇಕೆಂದು ಸೂಚಿಸಿದ್ದಾರೆ. ಒಂದೇ ರೀತಿ ತಂಡ ಮಾಡಿ ಕೊಟ್ಟರೆ ಸರಿಯಾಗಲ್ಲ. ಬಿಟ್ ಕಾಯಿನ್ ಹಗರಣದಲ್ಲಿ ಐಟಿ ಎಕ್ಸ್ ಫರ್ಟ್ ಗೆ ಕೊಡಬೇಕು. ಗಂಗಾ ಕಲ್ಯಾಣದಲ್ಲಿ ಆದಾಯ ಪಂಚ್ ಮಾಡಿದ್ದಾರೆ. ಹೀಗಾಗಿ ಬೇರೆ ಬೇರೆಯದ್ದಕ್ಕೆ ಬೇರೆ ಮಾಡಬೇಕಾಗುತ್ತದೆ. ಸಿಎಂ ಇದರ ಬಗ್ಗೆ ಚರ್ಚೆ ಮಾಡ್ತಾರೆ. ಸಿಐಡಿ ಅಂದರೆ ಕಳ್ಳನ ಕೈಗೆ ಕೀ ಕೊಟ್ಟಂತಾಗುತ್ತದೆ. ಹಾಗಾಗಿ ನೋಡಿಕೊಂಡೇ ತನಿಖೆ ಮಾಡಬೇಕಾಗುತ್ತದೆ ಎಂದರು.

ಎಸ್.ಐ ಟಿ ತಂಡ ರಚನೆ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ಈ ನಿರ್ಧಾರ ತೆಗೆದುಕೊಳ್ಳುವ ಇಂದಿನ ಕ್ಯಾಬಿನೆಟ್ ಅವಶ್ಯಕತೆ ಇಲ್ಲ. ಹೋದ ಕ್ಯಾಬಿನೆಟ್ ನಲ್ಲೇ ಚರ್ಚೆ ಆಗಿದೆ. ಯಾವ ತಂಡ ರಚನೆ ಮಾಡಬೇಕು ಅಂತ ಈಗಾಗಲೇ ಸೂಚನೆ ನೀಡಲಾಗಿದೆ. ಸಿಎಂ ಹಾಗೂ ಡಿಸಿಎಂ ಸೇರಿದಂತೆ ಇದಕ್ಕೆ ಸಂಬಂಧಸಿದವರು ಚರ್ಚೆ ಮಾಡಿದ್ದಾರೆಂದು ಮಾಹಿತಿ ನೀಡಿದರು.




