ARRESTED STUDENTS TEAR: ನಾಗರಬಾವಿ ವಿದ್ಯಾರ್ಥಿಗಳ ಘರ್ಷಣೆ: ಸಾಹಸ್ ಲಾಂಗ್ ತಂದಿರೋದು ಗೊತ್ತಿರಲಿಲ್ಲ: ಕಣ್ಣೀರಿಟ್ಟ ವಿದ್ಯಾರ್ಥಿಗಳು

ಬೆಂಗಳೂರು : ಬೆಂಗಳೂರಿನ ನಾಗರಾಭಾವಿ ಖಾಸಗಿ ಕಾಲೇಜು ಮುಂಭಾಗ ನಡೆದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಜೆಪಿ ನಗರ ಪೊಲೀಸರು ಏಳು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿ ದರ್ಶನ್ ಎಂಬಾತನ ಮೇಲೆ ನಡೆದ ಅಟ್ಯಾಕ್ ಕುರಿತು ಅಸಲಿ ಕಾರಣ ಆರೋಪಿಗಳ ವಿಚಾರಣೆಯಿಂದ ತಿಳಿದುಬಂದಿದೆ. ದರ್ಶನ್ ಹಾಗೂ ಪ್ರಮುಖ ಆರೋಪಿ ಸಾಹಸ್ ಗೌಡ@ಸತ್ಯ ಇಬ್ಬರ ನಡುವೆ ಇದ್ದ ವೈಷಮ್ಯವೇ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಹುಡುಗಿ ವಿಚಾರಕ್ಕೆ ಗಲಾಟೆ ದರ್ಶನ್ ಸ್ನೇಹಿತರು ಮತ್ತು ಸಾಹಸ್ ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದರು. ಈ ಗಲಾಟೆಯೇ ಖಾಸಗಿ ಕಾಲೇಜ್ ಮುಭಾಗ ದರ್ಶನ್ ಎಂಬ ವಿದ್ಯಾರ್ಥಿ ಮೇಲೆ ನಡೆದಿತ್ತು ಅಟ್ಯಾಕ್.

ಅಲ್ಲದೆ ಗಲಾಟೆ ಪ್ರಕರಣವೊಂದಕ್ಕೆ ಸಂಬಂಧ ಪಟ್ಟಂತೆ ಸಾಹಸ್ ಗೌಡ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ, ಹೀಗೆ ಬಿಟ್ಟರೆ ದರ್ಶನ್ ನನ್ನನ್ನೇ ಹೊಡಿತಾನೆ ಅಂತಾ ಪ್ಲಾನ್ ಮಾಡಿ ಬೇರೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಹಾಗೂ ಹೊರಗಿನ ಮೂವರು ಹುಡುಗರನ್ನ ಕರೆತಂದು ಗಲಾಟೆ ಮಾಡಿಕೊಂಡಿದ್ದಾರೆ.
ಕಾಲೇಜು ಮುಂಭಾಗದಲ್ಲೇ ದರ್ಶನ್ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿದ್ದ ವಿಚಾರದಿಂದ ವಿದ್ಯಾರ್ಥಿಗಳು ವಿಚಾರಣೆ ವೇಳೆ ಕಣ್ಣೀರಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಹಸ್ ಲಾಂಗ್ ತಂದಿರೋದು ಗೊತ್ತಾಗಿಲ್ಲ, ಸುಮ್ಮನೆ ಹೆದರಿಸಲು ಅಂತಾ ಕರೆದುಕೊಂಡು ಬಂದಿದ್ದರು. ನಮ್ಮ ಲೈಫೇ ಹಾಳಾಯ್ತು ಅಂತಾ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ ಎಂದು ಜೆಪಿ ನಗರ ಪೊಲೀಸರು ತಿಳಿಸಿದ್ದಾರೆ.

More News