Notice To Renukacharya And Yatnal: ಬಿಜೆಪಿ ವಿರುದ್ಧ ಟೀಕೆ: ರೇಣುಕಾಚಾರ್ಯ ಮತ್ತು ಬಸವನಗೌಡ ಪಾಟೀಲ್ ಗೆ ನೋಟಿಸ್

ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ ಹಿನ್ನಲೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಬಸವನಗೌಡ ಪಾಟೀಲ್ ಗೆ ನೋಟಿಸ್ ಜಾರಿ ಮಾಡಲಾಗಿದೆ.

ಎಚ್ಚರಿಕೆ ಕೊಡೋಕೆ ನಮ್ಗೇನು ಸಂಬಳ ಕೊಟ್ಟಿದ್ದೀರಾ..? ಗ್ರಾಮ ಪಂಚಾಯತ್ ಚುನಾವಣೆ ಯನ್ನೂ ಗೆಲ್ಲದವ್ರನ್ನ ಕರೆತಂದು ನಮ್ಗೆ ಗೈಡ್ ಕೊಡ್ತೀರಲ್ರೀ..? ಯಡಿಯೂರಪ್ಪ ರನ್ನ ಬೇಕಂತಲೇ ಇಳಿಸಿಬಿಟ್ರಲ್ಲಾ.. ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ರಾಜೀನಾಮೆ ನೀಡ್ಲಿ.. ಹೀನಾಯ ಸೋಲು ಕಂಡ್ರೂ ಯಾಕಿನ್ನೂ ಅಧಿಕಾರಲ್ಲಿ ಇದ್ದಾರೆ..? ಎಂದು ಮಾಜಿ ಸಚಿವ ರೇಣುಕಾಚಾರ್ಯ ಪಕ್ಷದ ವಿರುದ್ದ ನಿರಂತರವಾಗಿ ಗುಡುಗಿದ್ದರು.

ಅತ್ತ ಬಸವರಾಜ್ ಬೊಮ್ಮಾಯಿ ನಾಮಕಾವಸ್ತೆ ಸಿಎಂ.. ಹೊಂದಾಣಿಕೆ ರಾಜಕಾರಣ ಮಾಡ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಕುಟುಕಿದ್ದರು.. ಇಬ್ಬರ ಹೇಳಿಕೆಯಿಂದ ಮುಜುಗರಕ್ಕೆ ಸಿಲುಕಿದ ಬಿಜೆಪಿ ಇಬ್ಬರು ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ನಿರ್ಧರಿಸಿದೆ.

ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಗೆ ನೋಟಿಸ್ ಜಾರಿ ಮಾಡಲಾಗಿದೆ. ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಇಬ್ಬರಿಗೂ ನೋಟಿಸ್ ನೀಡಿದ್ದು, ನಾಳೆ ಬಂದು.. ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.

More News