Toby Teaser: ವಿಲಕ್ಷಣ ವ್ಯಕ್ತಿ ಗೆಟಪ್ ನಲ್ಲಿ ರಾಜ್ ಬಿ.ಶೆಟ್ಟಿ: ಟೋಬಿ’ಯಲ್ಲಿ ರಗಡ್ ಲುಕ್ ಮೂಲಕ ಎಂಟ್ರಿ

ವಿಭಿನ್ನ ಪಾತ್ರಗಳ ಮೂಲಕ ಜನಮನ ಗೆದ್ದಿರುವ ನಟ ರಾಜ್ ಬಿ. ಶೆಟ್ಟಿ ಇದೀಗ ವಿಲಕ್ಷಣ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಕಾರವಾರ ಮೂಲದ ನೈಜ ಕಥೆಯಾಧಾರಿತ ಸಿನಿಮಾ ‘ಟೋಬಿ’ಯ ರಗಡ್ ಲುಕ್ ನಲ್ಲಿ ರಾಜ್ ಬಿ.ಶೆಟ್ಟಿ ಗಮನ ಸೆಳೆದಿದ್ದಾರೆ.

ಬಕ್ರೀದ್ ದಿನವೇ ಟೀಸರ್​ ಬಿಡುಗಡೆಯಾಗಿದ್ದು, ರಾಜ್ ಬಿ.ಶೆಟ್ಟಿ ಫಸ್ಟ್ ಲುಕ್ ನೋಡುಗರ ಸೆಳೆದಿದೆ. ಈ ಸಿನಿಮಾದ ಟೀಸರ್ ನಲ್ಲಿ ಟಗರು ಮತ್ತು ರಾಜ್ ಅವರ ಮುಖವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಈ ಚಿತ್ರ ಆಗಸ್ಟ್​ ತಿಂಗಳಿನಲ್ಲಿ ತೆರೆ ಮೇಲೆ ಅಬ್ಬರಿಸಲಿದೆ.

ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡ್ತಿದೆ ಟೋಬಿ ಸಿನಿಮಾ. ಈ ಸಿನಿಮಾದಲ್ಲಿನ ಶೆಟ್ಟರ ಲುಕ್ ಸಿನಿಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರಕಥೆ ಕಥೆಗಾರ ಟಿ.ಕೆ ದಯಾನಂದ್ ಬರೆದಿರುವ ಜತೆಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಸದ್ಯ ಟ್ರೆಂಡಿಂಗ್ ನಲ್ಲಿರುವ ಟೋಬಿ ಸಿನಿಮಾದ ಟ್ರೇಲರ್, ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಸ್ವತಃ ನೋಡಿದ ಕಾರವಾರದ ವಿಲಕ್ಷಣ ವ್ಯಕ್ತಿಯ ಬದುಕನ್ನು ತೆರೆ ಮೇಲೆ ತರಲಾಗಿದೆ. ಆ ವ್ಯಕ್ತಿಯನ್ನು ನೋಡಿದಾಗಿಂದ, ನನ್ನಲ್ಲಿ ಆತ ನಾನಾ ರೀತಿಯಲ್ಲಿ ಕಾಡಿದ. ಆ ಕಾಡಿದ ವ್ಯಕ್ತಿಯ ಕಥೆಯೇ ಟೋಬಿ ಸಿನಿಮಾ ಎಂದಿದ್ದಾರೆ ಟಿ.ಕೆ.ದಯಾನಂದ್.

ಒಟ್ಟಿನಲ್ಲಿ ಈ ಚಿತ್ರದ ಮೂಲಕ ರಾಜ್ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. ಈ ಹಿಂದೆ ಈ ಸಿನಿಮಾದ ಸಣ್ಣ ಝಲಕ್ ವೊಂದು ರಿವೀಲ್ ಆಗಿ ಸಿನಿಪ್ರಿಯರ ಗಮನ ಸೆಳೆದಿತ್ತು. ಈಗ ಟೀಸರ್ ಮೂಲಕ ರಾಜ್ ಬಿ ಶೆಟ್ಟಿ ಟೋಬಿ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಮೂಗಿಗೆ ರಿಂಗ್ ಧರಿಸಿದ್ದು, ರಕ್ತಸಿಕ್ತ ಮುಖದಲ್ಲಿ ಇಂಟು ಮಾರ್ಕ್ ಇದೆ. ಟೋಟಲಿ ರಾ ಲುಕ್‌ನಲ್ಲಿ ಶೆಟ್ರು ಮಿಂಚುತ್ತಿದ್ದಾರೆ. ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ಚೈತ್ರಾ ಆಚಾರ್ ನಟಿಸಿದ್ದಾರೆ.

ಇನ್ನು ‘ಟೋಬಿ’ ಸಿನಿಮಾದಲ್ಲಿ ಕಂಟೆಂಟ್ ಹಾಗು ಕಮರ್ಷಿಯಲ್ ಟಚ್ ಕೂಡ ಇದೆ. ಈ ಚಿತ್ರ ರಾಜ್ ಬಿ ಶೆಟ್ಟರ ಮೊದಲ ಕರ್ಮಷಿಯಲ್ ಸಿನಿಮಾ ಆಗಿದೆ. ಸಿನಿಪಂಡಿತರನ್ನು ಸೆಳೆದಿರುವ ಈ ಸಿನಿಮಾ ಬಿಡುಗಡೆ ಬಳಿಕ ಮೈಲುಗಲ್ಲು ಸೃಷ್ಟಿಸಲಿದೆಯಾ ಕಾದುನೋಡಬೇಕಿದೆ.

More News

You cannot copy content of this page