ಬೆಂಗಳೂರು : ಸಿಎಂ ಸಿದ್ದರಾಮಯ್ಯ ಏನು ಚಪ್ರಾಸಿ ಅಲ್ವಲ್ಲಾ..?, ಅವ್ರು ಮೋಸ್ಟ್ ಎಕ್ಸಿಪಿರಿಯನ್ಸ್ ಚೀಫ್ ಮಿನಿಸ್ಟರ್ ತಾನೇ ಎಂದು ಹೇಳುವುದರ ಮೂಲಕ ಬಿಜೆಪಿ ಶಾಸಕ ಸಿಟಿ ರವಿ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬಿಜೆಪಿ ಕೇಂದ್ರೀಯ ಕಚೇರಿಯಲ್ಲಿ ಪ್ರಮುಖರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲದರ ದರವನ್ನು ಇಳಿಸುವ ತಾಕತ್ತು ಅವರಿಗೆ ಇದೆ ಅಲ್ವಾ, ಇವ್ರು ಒಂದು ಮಾದರಿ ಆಗಬೇಕು ಅಂದರೆ ಎಲ್ಲ ದರವನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆ ಕುರಿತು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂಬ ಆರೋಪಕ್ಕೆ ಸಿಟಿ ರವಿ ಈ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಶಾಸಕ ಸಿಟಿ ರವಿ ಮುಖ್ಯಮಂತ್ರಿ ಪದವಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಇದೇ ಸಂದರ್ಭದಲ್ಲಿ ದೂರಿದೆ.
ಇವಾಗ ಕಾಂಗ್ರೆಸ್ ನವರು ಪ್ರಮಾಣಿಕರು ಅಲ್ವಾ..? ಅವರು ಇವಾಗ ಪ್ರಾಮಾಣಿಕತೆಯನ್ನು ಸಾಭೀತು ಪಡಿಸಿಕೊಳ್ಳಬೇಕು, ಇಲ್ಲವಾದಲ್ಲಿ ಅವರು ಪರಮ ಭ್ರಷ್ಟರು ಎಂದು ಸಾಬೀತು ಆಗುತ್ತದೆ ಎಂದರು. ಒಂದು ತಿಂಗಳಲ್ಲಿ ಅರ್ಕಾವತಿ ಹಗರಣದ ಆರೋಪಿಗಳನ್ನು ಜೈಲಿಗೆ ಕಳುಹಿಸಲಿ ಎಂದು ಒತ್ತಾಯಿಸಿದರು.
೮೦೦೦ ಕೋಟಿ ಹಣವನ್ನು ಅವರು ಬೊಕ್ಕಸಕ್ಕೆ ತುಂಬಿಸಿಕೊಳ್ಳಲಿ, ಇವಾಗ ಅವ್ರು ಅವರ ಸಾಮರ್ಥ್ಯವನ್ನು ತೋರಿಸಲಿ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ 5 ಕೆಜಿ ಅಕ್ಕಿಗೆ ಹಣ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರಿಗೆ ಲೆಕ್ಕ ಹೇಳಿಕೊಡವೇಕಾ..? ಅವರು ಸದನದಲ್ಲಿ ಲೆಕ್ಕದ ಬಗ್ಗೆ ಪಾಠ ಮಾಡೋರಿಗೆ ಲೆಕ್ಕ ಗೊತ್ತಿಲ್ವೇ..? ಸುಮ್ಮನೆ ಇವರು ಏನು ಕೊಡಲ್ಲ, ಈಗಾಗಲೇ ಏರಿಸಿದ್ದೆಲ್ಲ ಏರಿಸಿದ್ಸಾರೆ, ಹೀಗಾಗಿ ಏರಿಸಿದರ ತಕ್ಕಂತೆ ೧೦ ಕೆಜಿಗೆ 500 ರೂಪಾಯಿ ಕೊಡಬೇಕು ಎಂದರು.