ಬೆಂಗಳೂರು: ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದ ಮಾಜಿ ಶಾಸಕ ರೇಣುಕಾಚಾರ್ಯ, ವಿವರಣೆ ನೀಡಲು ಆಗಮಿಸದೇ ಚಾಲೆಂಜ್ ಮಾಡಿದ್ದಾರೆ. ಬಿಜೆಪಿ ನಾಯಕರ ಮುಂದೆ ವಿವರಣೆ ನೀಡಲು ರೇಣುಕಾಚಾರ್ಯ ಗೈರು ಹಾಜರಾಗಿದ್ದರು. ಇದರಿಂದ ಪಕ್ಷದಲ್ಲಿನ ಭಿನ್ನಮತ ಮುಂದುವರೆದಿದ್ದು, ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಬೇಕಿತ್ತು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದರು. ಇದರಿಂದ ಬಿಜೆಪಿ ನಾಯಕರು ಸಾಕಷ್ಟು ಮುಜುಗರಕ್ಕೀಡು ಮಾಡಲಾಗಿತ್ತು. ರೇಣುಕಾಚಾರ್ಯ ಅವರನ್ನ ಕರೆದು ಮಾತನಾಡಲು ಯಡಿಯೂರಪ್ಪ ಅವರಿಗೆ ಕಟೀಲ್ ಜವಾಬ್ದಾರಿ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟು 7 ಮಂದಿಯಿಂದ ಬಿಜೆಪಿ ನಾಯಕರ ಮುಂದೆ ವಿವರಣೆ ನಾನಾ ರೀತಿಯಲ್ಲಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ ಏಳು ಬಿಜೆಪಿ ಮುಖಂಡರಿಂದ ಇಂದು ನಡೆದ ಪ್ರಮುಖರ ಸಭೆ ವಿವರಣೆ ಪಡೆದಿದೆ. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಮುನಿರಾಜು, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎ.ಎಸ್.ಪಾಟೀಲ್ ನಡಹಳ್ಳಿ, ಬ್ಯಾಟರಾಯನಪುರ ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಅವರಿಂದ ಇಂದು ನಡೆದ ಸಭೆಯಲ್ಲಿ ವಿವರಣೆ ನೀಡಿದರು.