ಬೆಂಗಳೂರು : ಬಿಜೆಪಿಯಲ್ಲಿ ಕೊನೆಗೂ ವಿಪಕ್ಷ ನಾಯಕನ ಆಯ್ಕೆಗೆ ಮೂಹೂರ್ತ ಫಿಕ್ಸ್ ಆಗಿದೆ. ಹಿಂದಿನ ಒಂದು ಅಧಿವೇಶನವನ್ನು ವಿಪಕ್ಷ ನಾಯಕನಿಲ್ಲದೆ ಮುಗಿಸಲಾಗಿದೆ. ಇದೀಗ ನಾಯಕನ ಆಯ್ಕೆಗೆ ಸಿದ್ದತೆಗಳು ಆರಂಭವಾಗಿವೆ.
ಭಾನುವಾರ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಈನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅಂದಿನ ಸಭೆಗೆ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭಾಗಿಯಾಗಲಿದ್ದಾರೆ.