ಹೀರೋಗಳು ಅಸಭ್ಯವಾಗಿ ಮಾತನಾಡಿದ್ರೆ, ಬೋಲ್ಡ್ ಸೀನ್ ಗಳಲ್ಲಿ ಕಂಡ್ರೆ ಸೂಪರ್ ಸ್ಟಾರ್ ಆಗ್ತಾರೆ. ಆದರೆ ಅದೇ ರೀತಿ ಹುಡುಗಿ ಕಾಣಿಸಿಕೊಂಡರೆ ಆಕೆಯ ಚಾರಿತ್ರ್ಯ ಬಗ್ಗೆ ಯಾಕೆ ಚರ್ಚೆ ಆಗುತ್ತೆ ಎಂದು ನಟಿ ತಮನ್ನಾ ಗರಂ ಆಗಿದ್ದಾರೆ.
ಬಾಯ್ಫ್ರೆಂಡ್.. ಡೇಟಿಂಗ್.. ಕಿಸ್ಸಿಂಗ್.. ವಿಚಾರದಲ್ಲಿ ಸದ್ದು ಮಾಡ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗ್ತಿದೆ.
ಸೌತ್ ಸಿನಿಮಾಗಳಲ್ಲಿ ಸಂಪ್ರದಾಯಸ್ಥ ಗೆಟಪ್ ಹಾಕಿ, ಬಾಲಿವುಡ್ ಗೆ ಹಾರುತ್ತಿದ್ದಂತೆ ಬೋಲ್ಡ್ ಸೀನ್ ಗಳಲ್ಲಿ ಕಾಣಿಸಿಕೊಂಡದ್ದು ಮಿಲ್ಕಿ ಬ್ಯೂಟಿ ಅಭಿಮಾನಿಗಳಿಗೆ ನೋವುಂಟಾಗಿದ್ಯಂತೆ. ತಮ್ಮ ವಿರುದ್ಧದ ಟೀಕೆಗೆ ಸಿಟ್ಟೆದ್ದ ನಟಿ ತಮ್ಮನ್ನಾ ಹೆಣ್ಮಕ್ಳು ಬೋಲ್ಡ್ ಸೀನ್ ನಲ್ಲಿ ಕಾಣಿಸಿಕೊಂಡ್ರೆ ಮಾತ್ರ ಯಾಕೆ ವಿರೋಧ ಎಂದು ಪ್ರಶ್ನೆ ಹಾಕಿದ್ದಾರೆ.

ಲಸ್ಟ್ ಸ್ಟೋರೀಸ್ 2 ಬಿಡುಗಡೆ ಕಂಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಮೊದಲ ಬಾರಿಗೆ ಭಿನ್ನ ಪಾತ್ರದಲ್ಲಿ ನಟಿಸಿರುವ ತಮನ್ನಾಗೆ ಜನರ ರೆಸ್ಪಾನ್ಸ್ ಕಂಡು ಬೇಸರವಾಗಿ ಹೋಗಿದ್ಯಂತೆ. ಈ ಬಗ್ಗೆ ಖಾಸಗಿ ಚಾನಲ್ ಗೆ ಮಾತನಾಡಿರುವ ಅವರು, ಬೋಲ್ಡ್ ಸೀನ್ ನಲ್ಲಿ ನಟಿಸಬೇಕಂದ್ರೆ ಸಹ ನಟರಿಂದ ಕಂಫರ್ಟೆಬಲ್ ಅನಿಸೋ ಫೀಲ್ ಆಗ್ಬೇಕು.. ನನಗೆ ಆ ರೀತಿ ಕಂಫರ್ಟೆಬಲ್ ಅನಿಸ್ತಿರ್ಲಿಲ್ಲ.. ಆದರೆ ಸೇಫ್ ಅನ್ನೋ ಫೀಲ್ ನಂಗೆ ವಿಜಯ್ ವರ್ಮಾ ರಿಂದ ಸಿಕ್ಕಿದೆ. ಅದು ಇಷ್ಟ ಆಯ್ತು ಎಂದಿದ್ದಾರೆ.

ನಿಮ್ಮ ಕಿಸ್ಸಿಂಗ್ ಸೀನ್ ಭಾರೀ ಚರ್ಚೆ ಹುಟ್ಟುಹಾಕಿದೆ. ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಅದಕ್ಕೆ ಏನು ನಿಮ್ಮ ಉತ್ತರ ಎಂಬ ಪ್ರಶ್ನೆಗೆ ಮಾತನಾಡಿದ ನಟಿ ತಮನ್ನಾ, ನನ್ನ 18 ವರ್ಷಗಳ ವೃತ್ತಿ ಅನುಭವದಲ್ಲಿ ನಾನೆಂದಿಗೂ ತೆರೆಯ ಮೇಲೆ ಚುಂಬಿಸಿಲ್ಲ. ನಾನು ಈ ಬಗ್ಗೆ ಕಡಾಖಂಡಿತವಾಗಿ ಸಿನಿಮಾ ಒಪ್ಪಿಕೊಳ್ಳುವ ಮುನ್ನವೇ ಹೇಳಿಬಿಡುತ್ತಿದ್ದೆ. ಚುಂಬನದ ದೃಶ್ಯಗಳಲ್ಲಿ ನಾನು ನಟಿಸಲು ಸಾಧ್ಯವಿಲ್ಲ ಎಂದು. ಆದರೆ ನನ್ನ ನಿಮಯದ ಬಗ್ಗೆ ಬರು ಬರುತ್ತಾ ನನ್ನಲ್ಲೇ ಪ್ರಶ್ನೆ ಹುಟ್ಟುಹಾಕಿತು. ನಟಿಯಾಗಿ ನಾನೇಕೆ ಅಡೆತಡೆಗಳು ಮತ್ತು ನಿಯಮಗಳನ್ನು ಹಾಕಬೇಕು? ನಾನೇಕೆ ನಟಿಯಾಗಿ ಮತ್ತಷ್ಟು ಬೆಳೆಯಬಾರದು ಎನಿಸಿತು. ಚುಂಬನ ದೃಶ್ಯಗಳ ಬಗ್ಗೆ ನನ್ನ ನಿಯಮ ಅರ್ಥಹೀನ ಎನಿಸಿತು. ಹಾಗಾಗಿ ಆ ನಿಯಮವನ್ನು ಮುರಿದಿದ್ದೇನೆ.
ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ಆದರೆ ಬರುವ ವಿಮರ್ಶೆಗಳ ಬಗ್ಗೆ ಬೇಸರ ಇದೆ. ನನ್ನದೇ ಪಾತ್ರವನ್ನ ನಟರು ನಟಿಸಿದ್ದರೆ ಅದನ್ನು ಬಹಳ ಸಹಜವಾಗಿ ಜನ ಸ್ವೀಕರಿಸ್ತಾರೆ. ಹೀರೋಗಳು ಅಸಭ್ಯವಾಗಿ ಮಾತನಾಡಿದ್ರೆ, ಬೋಲ್ಡ್ ಸೀನ್ ಗಳಲ್ಲಿ ಕಂಡ್ರೆ ಸೂಪರ್ ಸ್ಟಾರ್ ಆಗ್ತಾರೆ. ಆದರೆ ಅದೇ ರೀತಿ ಹುಡುಗಿ ಕಾಣಿಸಿಕೊಂಡರೆ ಆಕೆಯ ಚಾರಿತ್ರ್ಯ ಬಗ್ಗೆ ಯಾಕೆ ಚರ್ಚೆ ಆಗುತ್ತೆ ಎಂದು ಪ್ರಶ್ನೆ ಹಾಕಿದರು.