ಸಿನಿ ಅಂಗಳದಲ್ಲಿ ಸಧ್ಯ ಮದುವೆ ಸುದ್ದಿಯೇ ಸದ್ದು ಮಾಡ್ತಿದೆ. ಇದೀಗ ಮದ್ವೆ ರೇಸ್ ನಲ್ಲಿ ಸ್ಯಾಂಡಲ್ ವುಡ್ ನ ನಟಿ ಹರ್ಷಿಕಾ ಪೂಣಚ್ಚ ಹೆಸರು ಜೋರಾಗಿ ಕೇಳಿಬಂದಿದೆ. ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿಯಲು ನಟಿ ಹರ್ಷಿಕಾ ನಿರ್ಧರಿಸಿದ್ದಾರೆ.
ಹೌದು, ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಹಳ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ಮದ್ವೆ ಆಗಲು ನಿರ್ಧರಿಸಿದ್ದು, ಆಗಸ್ಟ್ ನಲ್ಲೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ಭುವನ್ ಮತ್ತು ಹರ್ಷಿಕಾ ಪ್ರೇಮ ಕಥೆ ಅಲ್ಲಿಲ್ಲಿ ಸದ್ದು ಮಾಡಿದ್ರೂ ಅಧಿಕೃತವಾಗಿ ಹೇಳಿಕೆ ನೀಡಿರಲಿಲ್ಲ.
ಆದರೆ ಸಿನಿಮಾ ಪ್ರಚಾರದ ವೇಳೆಯಲ್ಲೆಲ್ಲಾ ಇಬ್ಬರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಇದೀಗ ಬಹು ಕಾಲದ ತಮ್ಮ ಪ್ರೇಮಕ್ಕೆ ಅಧಿಕೃತ ಮುದ್ರೆ ಒತ್ತಲು ತಯಾರಿ ನಟಿಸಿದ್ದು, ಆಗಸ್ಟ್ 24 ರಂದು ಕೊಡವರ ಸಂಪ್ರದಾಯದಂತೆ, ಕೊಡಗಿನಲ್ಲಿ ಮದುವೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕುಟುಂಬದ ಮೂಲದ ಪ್ರಕಾರ, ಇಬ್ಬರ ಪ್ರೇಮ ಕುಟುಂಬವರಿಗೆ ಒಪ್ಪಿಗೆ ಇದ್ದು, ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದೆ. ಅಲ್ಲದೇ ಆಗಸ್ಟ್ 24 ರಂದು ಹರ್ಷಿಕಾ ಹಾಗೂ ಭುವನ್ ವಿರಾಜಪೇಟೆಯ ಅಮ್ಮತ್ತಿಯಲ್ಲಿ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.