ಬಿಸ್ಕೆಟ್, ಚಾಕಲೇಟ್ ಚಪ್ಪರಿಸಿ ತಿನ್ನುವ ಸಿಹಿ ಪ್ರಿಯರೇ ಎಚ್ಚರವಾಗಿರಿ.. ನೀವು ಮೆಚ್ಚಿ ಕೊಂಡು ತಿನ್ನುವ ಬಿಸ್ಕೆಟ್ , ಚಾಕಲೇಟ್ ಪದಾರ್ಥಗಳೇ ನಿಮ್ಮ ದೇಹಕ್ಕೆ ವಿಷವಾಗಿ ಪರಿವರ್ತಿಸ್ತಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ.?
ಆಫರ್.. ಆಫರ್.. ಒಂದು ಕೊಂಡರೆ ಮತ್ತೊಂದು ಫ್ರೀ.. 50 + 50% ಡಿಸ್ಕೌಂಟ್.. ಎಂದೆಲ್ಲಾ ಬೋರ್ಡ್ ನೋಡಿ ಖುಷಿಯಾಗಿ ಸಿಕ್ಕದ್ದೆಲ್ಲಾ ಪರ್ಚೇಸ್ ಮಾಡೋ ಮಂದಿ ಈ ಸ್ಟೋರಿ ಯನ್ನ ನೋಡ್ಲೇ ಬೇಕು. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಕಾರ್ಯಾಚರಣೆಯೊಂದನ್ನ ಸಿಸಿಬಿ ಪೊಲೀಸರು ಹೊರಗೆಳಿದಿದ್ದಾರೆ.

ಅವಧಿ ಮುಗಿದ ವಸ್ತುಗಳನ್ನೇ ರೀ ಪ್ರೊಡಕ್ಷನ್ ಮಾಡಿರುವ ಅನುಮಾನ ಹಿನ್ನಲೆ ಹರಿಹಂತ್ ಟ್ರೇಡಿಂಗ್ ಕಂಪನಿಯ ಹೆಸರಿನ ಗೋಡೌನ್ ಮೇಲೆ ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಯಿತು. ದಾಳಿ ವೇಳೆ ಡೇಟ್ ಎಕ್ಸಪೈರ್ ಆಗಿದ್ದ ಪದಾರ್ಥ ಗಳನ್ನೇ ಮತ್ತೆ ಮರು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರತಿಷ್ಠಿತ ಕಂಪನಿಗಳ ಬಿಸ್ಕತ್ತು, ಚಾಕಲೇಟ್, ಚಾಕಲೇಟ್ ಪೌಡರ್,ಅಡುಗೆ ಎಣ್ಣೆ, ಡಾಲ್ಡಾ ತುಪ್ಪ , ರವೆ, ಸೇರಿ ಹಲವಾರು ವಸ್ತುಗಳು ಪತ್ತೆ ಯಾಗಿದೆ. ಎಲ್ಲಾ ಸ್ಯಾಂಪಲ್ ಪಡೆದು FSLಗೆ ಕಳಿಸಿದ ಫುಡ್ ಸೇಫ್ಟಿ ಅಧಿಕಾರಿಗಳಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಲ್ಯಾಬ್ ವರದಿಗೆ ಕಳಿಸಿದ ಪದಾರ್ಥಗಳೆಲ್ಲವೂ ಎಕ್ಸ್ ಪೈರಿ ಡೇಟ್ ಮುಗಿದು ಹೋಗಿವೆ ಎಂಬ ಅಸಲಿಯತ್ತು ಬಯಲಾಗಲಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗೋಡೌನ್ ಮಾಲೀಕರಿಗೆ ಫುಡ್ ಸೇಫ್ಟಿ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.




