NWKSRTC WORKER SUICIDE: ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟ ಸಾರಿಗೆ ನೌಕರನ ಆತ್ಮಹತ್ಯೆ

ಹಾವೇರಿ : ಹತ್ತು ಹಲವಾರು ಅನುಮಾನಗಳನ್ನು ಮೂಡಿಸಿದ ಸಾರಿಗೆ ನೌಕರನ ಆತ್ಮಹತ್ಯೆ ಪ್ರಕರಣ ಇಂದು ರಾಣೆಬೆನ್ನೂರು ಬಸ್ ಡಿಪೋದಲ್ಲಿ ನಡೆದಿದೆ.
ಸಾರಿಗೆ ನೌಕರ ಡಿಪೋದಲ್ಲಿರುವ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 43 ವರ್ಷದ ಮಲ್ಲನಗೌಡ ಬಡಿಗೇರ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೇನ್ನೂರು ನಗರದ ಹೊರ ಹೊಲಯದ NWKSRTC ಬಸ್ ಡಿಪೋದಲ್ಲಿ ಮಲ್ಲನಗೌಡ ಆತ್ಮಹತ್ಯೆ ಮಾಡಿಕೊಂಡದ್ದ್ರಾರೆ. ಇವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಹಲಗೇರಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಲ್ಲನಗೌಡ ಅವರ ಆತ್ಮಹತ್ಯೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸ್ ತನಿಖೆಯಿಂದ ಸೂಕ್ತ ಮಾಹಿತಿ ಹೊರಬರಬೇಕಾಗಿದೆ.

More News