ನವದೆಹಲಿ: ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿವಾಸದ ಮೇಲೆ ಇಂದು ಬೆಳಗ್ಗಿನ ನಸುಕಿನ ವೇಳೆ ಸಂಶಯಾಸ್ಪದ ರೀತಿಯಲ್ಲಿ ದ್ರೋಣ್ ಹಾರಾಟ ನಡೆಸಿದ ಘಟನೆ ಜರುಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪ್ರಧಾನಿಯವರ ನಿವಾಸ ನೋ ಪ್ಲೈ ಝೋನ್ ಆಗಿದ್ದು, ನವದೆಹಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ದ್ರೋಣ್ ಜಾಡು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ನಸುಕಿನ ಜಾವ ಸುಮಾರು 5 ಗಂಟೆಗೆ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಯವರ ನಿವಾಸದ ಮೇಲೆ ದ್ರೋಣ್ ಹಾರಾಟ ನಡೆದಿತ್ತು. ಇದನ್ನು ಪ್ರಧಾನಿಯವರ ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ವಿಷಯ ತಿಳಿದ ದೆಹಲಿ ಪೊಲೀಸರು ಕೂಡಲೇ ದ್ರೋಣ್ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ನವದೆಹಲಿ ಪೊಲೀಸರ ಶೋಧ ಕಾರ್ಯದಿಂದ ಇದುವರೆಯೂ ದ್ರೋಣ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ದ್ರೋಣ್ ಹಾರಾಟದ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೂಡಲೇ ದ್ರೋಣ್ ಅನ್ನು ಪತ್ತೆ ಹಚ್ಚಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




