Committed Suicide: ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ದ ಡೆತ್ ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ..?

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಗ್ಗನಹಳ್ಳಿ‌ ನಿವಾಸಿ ಪವಿತ್ರಾ ಆತ್ಮಹತ್ಯೆಗೆ ಶರಣಾಗಿರೋ ದುರ್ದೈವಿ. ಜುಲೈ 02 ರ ಬೆಳಗಿನ ಜಾವ ಡೆತ್ ನೋಟ್ ಬರೆದಿಟ್ಟು ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತ ಪವಿತ್ರಾ ಮೊದಲ ಪತಿಗೆ ವಿಚ್ಚೇದನ ನೀಡಿ ಚೇತನ್ ಗೌಡರನ್ನ ಎರಡನೇ ಮದುವೆಯಾಗಿದ್ದರು. ಸುಮುಖ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ ಚೇತನ್ ಗೌಡ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಪವಿತ್ರಾ ಕೆಲಸ ಮಾಡ್ತಿದ್ರು. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ
ಮದುವೆಯಾಗಿದ್ದಾರೆ. ಆದ್ರೆ ಇತ್ತೀಚೆಗೆ ಮತ್ತೊರ್ವ ಯುವತಿಯ ವಿಚಾರವಾಗಿ ಪತಿ ಪತ್ನಿ ಮಧ್ಯೆ ಜಗಳವಾಗ್ತಿತ್ತು ಎನ್ನಲಾಗಿದ್ದು, ಈ ಬಗ್ಗೆ ತನ್ನ ತಾಯಿ ಪದ್ಮಮ್ಮ ಬಳಿ ಯೂ ಪತಿಯ ಬಗ್ಗೆ ಮಾಹಿತಿ ನೀಡಿದ್ದರಂತೆ ಪವಿತ್ರ. ಕಡೆಗೆ ಮನನೊಂದು ಡೆತ್ ನೋಟ್ ವಾಟ್ಸಾಫ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾರೆ.

ಇನ್ನು ಮಗಳ ವಾಟ್ಸಾಫ್ ಸ್ಟೇಟಸ್ ನಲ್ಲಿ ಡೆತ್ ನೋಟ್ ನೋಡಿ ಗಾಬರಿಗೆ ಒಳಗಾದ ತಾಯಿ ಪದ್ಮಮ್ಮ ಮಗಳ ಮನೆ ಬಳಿ ಧಾವಿಸಿಬಂದಾಗ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಘಟನೆ ಕುರಿತು ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊರ್ವ ಯುವತಿ ವಿರುದ್ದ ಎಫ್.ಐ.ಆರ್ ದಾಖಲಾಗಿದ್ದು,‌ ಮೃತಳ ತಾಯಿ ಪದ್ಮಮ್ಮರ ದೂರಿನನ್ವಯ ಐಪಿಸಿ ಸೆಕ್ಷನ್ 306 ರ ಅಡಿ ಆತ್ಮಹತ್ಯೆ ಪ್ರಚೋದನೆ ಎಂದು ದೂರು ದಾಖಲಾಗಿದ್ದು, ಡೆತ್ ನೋಟ್ ಹಾಗೂ ಮೃತಳ ಎರಡು ಪೋನ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

More News