ಯಾನಾಗುಂದಿಯಲ್ಲಿ ಭಕ್ತನ ಮೇಲೆ ದರ್ಪ : ಅಮಾನವೀಯವಾಗಿ ಎಳೆದೊಯ್ದು ಹೊರಹಾಕಿದ ಸಿಬ್ಬಂದಿ

ಸೇಡಂ : ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ತೆರಳಿದ ಸಾಧುವೊಬ್ಬನ ಮೇಲೆ ಆಶ್ರಮದವರೆನ್ನಲಾದ ಕೆಲವರು ಹಲ್ಲೆ ನಡೆಸಿ, ದೇವಾಲಯದಿಂದ ಹೊರಹಾಕಿದ ಘಟನೆ ಜರುಗಿದೆ.

ಹಲವು ವರ್ಷಗಳಿಂದ ಯಾನಾಗುಂದಿ ಆಶ್ರಮದಲ್ಲಿದ್ದ ಸನ್ಯಾಸಿಯೊಬ್ಬ ಕಳೆದ ರಾತ್ರಿ ಅಮ್ಮನ ಮಂದಿರದಲ್ಲಿ ಧ್ಯಾನ ಮಾಡಬೇಕು ಎಂದು ಅಂಗಲಾಚಿದ್ದಾನೆ. ಇದಕ್ಕೆ ಆಶ್ರಮದವರು ವಿರೋಧಿಸಿದ್ದರಿಂದ ದೇವಾಲಯದ ಬಾಗಿಲು ತೆರೆಯಲು ಯತ್ನಿಸಿದಾಗ ಆತನನ್ನು ಅಮಾನವೀಯವಾಗಿ ಎಳದೊಯ್ದು ಹೊರಹಾಕಲಾಗಿದೆ. ಆತನನ್ನು ಎಳೆದೊಯ್ದು ಹೊರಹಾಕಿರುವ ವಿಡಿಯೊವೊಂದು ವೈರಲ್ ಆಗಿದೆ.

ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಸನ್ಯಾಸಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಮಾತಾ ಮಾಣಿಕೇಶ್ವರಿ ಅಮ್ಮನವರು ಜೀವಂತವಾಗಿದ್ದಗಲೂ ಸಹ ಅಮ್ಮನವರ ದರ್ಶನಕ್ಕೆ ನಿರ್ಬಂಧಗಳನ್ನು ಅಲ್ಲಿನ ಟ್ರಸ್ಟ್ ಹೇರಿತ್ತು ಎನ್ನಲಾಗಿದೆ. ಅವರು ಲಿಂಗೈಕ್ಯರಾದ ನಂತರವೂ ಸಹ ಅಮ್ಮನವರ ಗರ್ಭಗುಡಿಯ ದರ್ಶನಕ್ಕೂ ಭಕ್ತರಿಗೆ ಅವಕಾಶ ಕಲ್ಪಿಸದ ಟ್ರಸ್ಟ ಸದಸ್ಯರ ನಡೆಯಿಂದ ಜನ ತೀವ್ರ ರೋಸಿಹೋಗಿದ್ದಾರೆ ಎಂದು ಭಕ್ತಾದಿಗಳು ತಿಳಿಸಿದ್ದಾರೆ.

ಈಗ ಹಲವು ವರ್ಷಗಳಿಂದ ಸೇವೆ ಮಾಡಿಕೊಂಡಿದ್ದ ಸನ್ಯಾಸಿಯ ಮೇಲಿನ ಹಲ್ಲೆ ನಡೆಸಿದ  ಟ್ರಸ್ಟನ ನಡೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತಾಗಿದೆ. ಅಲ್ಲದೆ ಅಹಿಂಸೆಯ ತತ್ವವನ್ನು ಮಾತಾ ಮಾಣಿಕೇಶ್ವರಿ ಅಮ್ಮನವರು ಸಾರಿದ್ದು, ಅದರ ವಿರುದ್ಧವಾಗಿ ಆಶ್ರಮದವರು ನಡೆದುಕೊಂಡಿದ್ದಾರೆ ಎಂದು ಸ್ಥಳೀಯರ ಮತ್ತು ಭಕ್ತಾದಿಗಳ ಆರೋಪವಾಗಿದೆ.

More News