ಬೆಂಗಳೂರು : ಅಲ್ಪಸಂಖ್ಯಾತರನ್ನ ಸಿಎಂ ಅಭ್ಯರ್ಥಿ ಎಂದು ಘೋಷಿಸಲು ಜೆಡಿಎಸ್ ನಾಯಕರುಗಳಿಗೆ ಶಾಸಕ ಜಮೀರ್ ಅಹಮದ್ ಸವಾಲು ಹಾಕಿದ್ದು, ನೀವು ದೆಹಲಿಗೆ ಹೋಗಬೇಕಾಗಿಲ್ಲ, ಇಲ್ಲೇ ಘೋಷಣೆ ಮಾಡಬಹುದು, ನೀವು ಪದ್ಮನಾಭನಗರದಲ್ಲಿ ಅನೌನ್ಸ್ ಮಾಡಬಹುದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೈಕಮಾಂಡ್ ಅವರಿಗೆ ಕೇಳಬೇಕು, ನಿಮ್ಮಪಕ್ಷದವರು ಎಲ್ಲಾರು ಇಲ್ಲೇ ಇದ್ದಾರಲ್ಲ, ಘೋಷಣೆ ಮಾಡಿ ಎಂದುಸವಾಲು ಹಾಕಿದರು.
ಹಾಗೆಯೇ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಜಮೀರ್, ಕುಮಾರಸ್ವಾಮಿ ಈಗ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡ್ತುತ್ತಾರೆ, ಜೆಡಿಎಸ್ ನಲ್ಲಿದ್ದಾಗ ವಿಷ ಕಾರ್ತಿದ್ರು ಎಂದರು. ನನ್ನನ್ನು ಸಿದ್ದರಾಮಯ್ಯ ರಾಜಕೀಯವಾಗಿ ಬೆಳೆಸುತ್ತಿದ್ದಾರೆ, ಅವರು ಯಾರನ್ನೂ ರಾಜಕೀಯವಾಗಿ ಮುಗಿಸಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಹಜ್ ಖಾತೆ ಕೊಟ್ಟಿದ್ರು, ಕುಮಾರಸ್ವಾಮಿಯವರೇ ಯೋಗ್ಯತೆ ಅದೇನಾ? ಎಂದು ಪ್ರಶ್ನಿಸಿದ ಜಮೀರ್, ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಸಿದ್ದರಾಮಯ್ಯ ಅವರು ನನಗೆ ಅಹಾರ ಖಾತೆ ಕೊಟ್ರು, ನಂತರ ನಾಲ್ಕು ಖಾತೆಗಳನ್ನ ಕೊಟ್ಟಿದ್ರು ಎಂದು ಸಮಾಜಾಯಿಸಿ ನೀಡಿದರು.
ಜಾಫರ್ ಷರೀಪ್ ಮೊಮ್ಮಗನನ್ನ ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ, ಕುಮಾರಸ್ವಾಮಿ ಅವರು ಮುಗಿಸಿದ್ದು ಎಂದು ಸ್ಪಷ್ಟಪಡಿಸಿದ ಅವರು, ಮುಸ್ಲಿಂರಿಗೆ ಅನ್ಯಾಯ ಮಾಡ್ಬೇಡಿ ಎಂದು ಮನವಿ ಮಾಡಿದ್ದೆ, ದೇವೇಗೌಡರ ಬಳಿಯೂ ಕೇಳಿಕೊಂಡಿದ್ದೆ, ಅದಕ್ಕೆ ನಾನು ಪ್ರಚಾರಕ್ಕೆ ಹೋಗಲಿಲ್ಲ, ದೇವೇಗೌಡರು ನನ್ನನ್ನು ಮೀರ್ ಸಾದಿಕ್ ಎಂದು ಕರೆದ್ರು, ಇದೇ ನಿಮ್ಮ ಮುಸ್ಲಿಂ ಕಾಳಜಿಯೇ ಎಂದು ಕುಮಾರಸ್ವಾಮಿ ಅವರಿಗೆ ಪ್ರಶ್ನಿಸಿದರು.
ಅಂದು ಬೈರತಿಗೆ ಮತಹಾಕಿಸಲು ಎಷ್ಟು ಡೀಲ್ ಮಾಡಿದ್ರಿ ಎಂದು ಲೇವಡಿ ಮಾಡಿ ಜಮೀರ್ , ಕುಮಾರಸ್ವಾಮಿ ಸ್ವಂತ ಅಣ್ಣ ಹೆಚ್ ಡಿ ರೇವಣ್ಣನನ್ನು ಸಹಿಸಲ್ಲ ಎಂದರು. ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟು ಕೊಡ್ಲಿಲ್ಲ, ಬಿಟ್ಟುಕೊಟ್ರೆ ರೇವಣ್ಣ ಡಿಸಿಎಂ ಆಗ್ರಾರೆ ಅನ್ನೋ ಭಯದಿಂದ ಎಂದು ಟಿಕೀಸಿದರು.




