ಹಾವೇರಿ: ವರದಾ ನದಿಯ ದಡದಲ್ಲಿ ಜಿಂಕೆಯ ಅರ್ಧಂಬರ್ಧ ಮೃತದೇಹ, ನವಿಲಿನ ರೆಕ್ಕೆಪುಕ್ಕಗಳು ಪತ್ತೆಯಾಗಿವೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಬಳಿಯ ವರದ ನದಿಯ ದಡದಲ್ಲಿ ಪತ್ತೆಯಾಗಿದೆ.

ಜಿಂಕೆಯ ಮೃತ ದೇಹದ ಸ್ಥಿತಿ ಕಂಡ ಸ್ಥಳೀಯ ರೈತರು ಚಿರತೆ ದಾಳಿ ಮಾಡಿರಬಹುದು ಎಂದು ಆಂತಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆ ಕೃಷಿ ಜಮೀಸಿಗೆ ರಾತ್ರಿ ವೇಳೆ ರೈತರು ನೀರು ಹಾಯಿಸಲು ಹಿಂದೇಟು ಹಾಕ್ತಿದ್ದಾರೆ.

ಈ ಹಿನ್ನಲೆ ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಮತ್ತು ನವಿಲಿನ ಸಾವಿನ ಕಾರಣ ಪತ್ತೆ ಹಚ್ಚಿ ಚಿರತೆ ಇರುವಿಕೆ ಪರಿಶೀಲಿಸಿ, ಚಿರತೆ ಸೆರೆಗೆ ಬೋನು ಇಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ..