ಬೆಂಗಳೂರು: ನಾಡ ಯೋಗಕ್ಷೇಮ ವಿಚಾರಿಸಲು ರೋಡಿಗಿಳಿದ ನಾಡ ಕಿರಿಯ ದೊರೆಗೆ ಇಂದಿಕಾ ಕ್ಯಾಂಟೀನ್ ತುಂಬೆಲ್ಲಾ ಸಮಸ್ಯೆ ಗಳ ಸರಮಾಲೆಯೇ ಎದುರಾಗಿದೆ.
ಬೆಳಂ ಬೆಳಗ್ಗೆಯೇ ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ಖಾಲಿ..!
ಬೆಳ್ಳಂ ಬೆಳಗ್ಗೆ ಕೊರೆಯುವ ಚಳಿಯಲ್ಲೂ ಬೆಂಗಳೂರು ಸರ್ಪ್ರೈಸ್ ವಿಸಿಟ್ ಹಾಕಲು ಡಿಸಿಎಂ ಡಿಕೆ ಶಿವಕುಮಾರ್ ರೋಡಿಗಿಳಿದರು. ಸದಾಶಿವ ನಗರದ ನಿವಾಸದಿಂದ ಕಾರತ್ತಿ ಹೊರಟ ಡಿಕೆ ಶಿವಕುಮಾರ್ ಗೆ ಮೊದಲು ಬೆಂಗಳೂರಿನ ಟ್ರಾಫಿಕ್ ಬ್ಯುಸಿ ತಟ್ಟಿದೆ. ಬಳಿಕ ಚೊಕ್ಕಸಂದ್ರ ಬಳಿ ಇದ್ದ
ಇಂದಿರಾ ಕ್ಯಾಂಟೀನ್ ಗೆ ಭೇಟಿ ಕೊಟ್ಟರು. ಸಿಬ್ಬಂದಿಗಳ ಜೊತೆ ವ್ಯವಸ್ಥೆ ಬಗ್ಗೆ ವಿಚಾರಿಸಿ ನಂಗೂ ಒಂದ್ ಪ್ಲೇಟ್ ತಿಂಡಿ ಕೊಡ್ರಪ್ಪ ಎಂದರೆ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಎಷ್ಚು ತಿಂಡಿ ಮಾಡ್ತಿರಾ? ಸಂಡೇ ಎಷ್ಟು ಜನ ಬರ್ತಾರೆ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸಿಬ್ಬಂದಿ
ಸಂಡೆಯಾದ್ದರಿಂದ ಹೆಚ್ಚು ಜನ ಬರಲ್ಲ , ಹಾಗಾಗಿ ಕಡಿಮೆ ಪ್ರಮಾಣದಲ್ಲಿ ತಿಂಡಿ ತರಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.

5 ರೂ. ಬೆಲೆಯ ತಿಂಡಿ 10 ಕ್ಕೆ ಮಾರಾಟ
ಚೊಕ್ಕಸಂದ್ರ ಇಂದಿರಾ ಕ್ಯಾಂಟೀನ್ ಭೇಟಿ ಬಳಿಕ
ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಭೇಟಿ ಕೊಟ್ಟ ಡಿಕೆ ಶಿವಕುಮಾರ್,
ಉಪ್ಪಿಟ್ಟು ಕೇಸರಿಬಾತ್ ಪಡೆದು ತಿನ್ನುತ್ತಾ ತಿಂಡಿ ಸೇವಿಸುತ್ತಿದ್ದ ಸಾರ್ವಜನಿಕರನ್ನು ಮಾತನಾಡಿಸಿದರು.
ದುಡ್ಡು ಎಷ್ಟು ಕೊಟ್ಟಿದ್ದಿರಾ ಎಂದು ಸಾರ್ವಜನಿಕರನ್ನ ಪ್ರಶ್ನಿಸಿದ ಡಿಕೆ ಶಿವಕುಮಾರ್ ಗೆ ಅಚ್ಚರಿ ಆಗಿದೆ. ಸಾಮಾನ್ಯವಾಗಿ ಇಂದಿರಾ ಕ್ಯಾಂಟೀನ್ ತಿಂಡಿಗೆ 5 ರೂಪಾಯಿ ಹಣವನ್ನ ನಿಗಧಿ ಮಾಡಲಾಗಿದೆ. ಆದ್ರೆ ಬಹುತೇಕ ಕ್ಯಾಂಟೀನ್ ಗಳಲ್ಲಿ 10 ರೂಪಾಯಿ ಯನ್ನು ಪಡೆಯಲಾಗ್ತಿದೆ. ಇದನ್ನ ಕಂಡು ಅಚ್ಚರಿಗೊಂಡ ಡಿಕೆ ಶಿವಕುಮಾರ್, ಐದು ರೂಪಾಯಿ ಬೆಲೆಗೆ ಹತ್ತು ರೂಪಾಯಿ ಪಡೆಯುತ್ತಿದ್ದೀಯಾ ಎಂದು ಪ್ರಶ್ನೆ ಹಾಕಿದ್ದಾರೆ. ಒಂದು ಸೌಟಿಗೆ 5 ರೂಪಾಯಿ, ಮತ್ತೊಂದು ಸೌಟಿಗೆ 5 ರೂಪಾಯಿ ಪಡೆದೆ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರು.
ಇನ್ನು ಇಂದೀರಾ ಕ್ಯಾಂಟೀನ್ ಊಟದಲ್ಲಿ ವ್ಯತ್ಯಾಸವಿದ್ದರೆ ಕರೆ ಮಾಡಿ ಎಂಬ ಸಂಖ್ಯೆ ಗೆ ಖುದ್ದು ಕರೆ ಮಾಡಿದ ಡಿಕೆ ಶಿವಕುಮಾರ್ ಅವರಿಗೆ ನಿರಾಸೆಯಾಯ್ತು. ಡಿಸಿಎಂ ಅವರೇ ಇಂದಿರಾ ಕ್ಯಾಂಟೀನ್ ಮೇಲೆ ಹಾಕಿದ್ದ ನಂಬರ್ ಗೆ ಕರೆ ಮಾಡಿದರೂ invalid ಎಂದು ಬಂದಿದೆ.ಇದರಿಂದ ಬೇಸತ್ತು ಆರೋಗ್ಯಾಧಿಕಾರಿಗೆ ನಿರ್ದೇಶನ ನೀಡಿದ ಡಿಸಿಎಂ ವಾರಕ್ಕೆ ಒಮ್ಮೆ ಭೇಟಿ ಕೊಟ್ಟು ಪರಿಶೀಲಿಸಿ ಎಂದು ಆದೇಶಿಸಿದರು.




