ಬೆಂಗಳೂರು : ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ,ದೌರ್ಜನ್ಯ ವಿಚಾರದಲ್ಲಿ ಬಿಜೆಪಿ ಸರ್ಕಾರ ಉತ್ತರ ಪ್ರದೇಶ ಮಾಡೆಲ್ ಅನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ.ಉತ್ತರ ಪ್ರದೇಶವನ್ನು ರೇಪ್ ರಾಜಧಾನಿ ಎಂದು ಕರೆಯುತ್ತಿದ್ದರು.ಆದರೆ ಈಗ ಆ ಅಪಕೀರ್ತಿ ಕರ್ನಾಟಕಕ್ಕೆ ತರುವ ಕೆಲಸವನ್ನು ಈ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಆರೋಪಿಸಿದರು.
ಮೈಸೂರು ಸಾಮೂಹಿಕ ಅತ್ಯಾಚಾರ ಖಂಡಿಸಿ ಮೌರ್ಯ ವೃತ್ತದಲ್ಲಿ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಅವರು,ಮಹಿಳೆ ಮೇಲೆ ದೌರ್ಜನ್ಯ ನಡೆದಾಗಲೂ ಅವರು ಮಂದಗತಿಯಲ್ಲಿ ಕಾರ್ಯ ನಿರ್ವಹಿಸು ತ್ತಿರುವುದು ನೋವಿನ ಸಂಗತಿ.ಇಷ್ಟಾದರೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.ಅವು ಏನಾದರೂ ಹೇಳಲಿ.ನೋಂದ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಲು ನಾವು ಇನ್ನಷ್ಟು ಹೋರಾಟ ಮಾಡುತ್ತೇವೆ.ರಾಮ ರಾಜ್ಯದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು.
ತೆರದಾಳದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಅವರು ಮಹಿಳೆ ಮೇಲೆ ಹಲ್ಲೆ ಮಾಡಿ ಗರ್ಭಪಾತಕ್ಕೆ ಕಾರಣರಾಗಿದ್ದರು. ಅವರ ಮೇಲೂ ಯಾವುದೇ ಕ್ರಮ ಜರುಗಿಸಲಿಲ್ಲ.ಇನ್ನು ಮಾಜಿ ಸಚಿವರ ಮೇಲೆ ಅತ್ಯಾಚಾರ ಆರೋಪ ಬಂದಾಗಲೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.ಇನ್ನುಮುಂದೆ ಇಂತಹ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ. ಬಿಜೆಪಿಯಲ್ಲಿರುವ ಮಹಿಳಾ ನಾಯಕಿ ಯರಾದ ಶೋಭಕ್ಕಾ,ಸ್ಮೃತಿ ಇರಾನಿ,ಇಲ್ಲಿನ ಶಶಿಕಲಾ ಜೊಲ್ಲೆ ಇವರು ಯಾಕೆ ಮಾತನಾಡುತ್ತಿಲ್ಲ.ಸಚಿವರಾಗಿ ದ್ದರೂ ಮಹಿಳೆಯರ ಪರ ಮಾತನಾಡಲು ಅವರಿಗೆ ಅಪಮಾನವೇ?’ ಪುಷ್ಪಾ ಅಮರನಾಥ್ ಪ್ರಶ್ನಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಚಿವ ಮೋಟಮ್ಮ,ಬಿಜೆಪಿ ಸರ್ಕಾರದ ನಾಯಕರಿಗೆ ಹೆಣ್ಣು ಮಕ್ಕಳೆ ಬಗ್ಗೆ ಕಾಳಜಿ ಇಲ್ಲವಾಗಿದೆ.ಪ್ರಧಾನಿ ಮೋದಿ ಅವರು ಬೇಟಿ ಬಚಾವೋ,ಬೇಟಿ ಪಡಾವೋ ಅಂತಾರೆ. ರಾಜಸ್ಥಾನದ ಉನ್ನಾವೋ,ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಷ್ಟೆಲ್ಲಾ ಘಟನೆ ನಡೆದರೂ ಮೋದಿ ಅವರು ಏಕೆ ತುಟಿ ಬಿಚ್ಚಿಲಿಲ್ಲ.ಬಿಜಾಪುರದಲ್ಲಿ ಶಾಲೆಗೆ ಹೋಗುತ್ತಿದ್ದ ದಾನಮ್ಮ ಎಂಬ ಹೆಣ್ಣು ಮಗಳನ್ನು ಎಳೆದೊಯದು ದೇವಾಲಯದ ಹಿಂಭಾಗದ ಆವರಣದಲ್ಲಿ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದರು.ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಮುಖ್ಯಮಂತ್ರಿಗಳಾಗಲಿ, ಪ್ರಧಾನಿಗಳಾಗಲಿ, ಸರ್ಕಾರದವರಾಗಲಿ ಯಾರೂ ಹೇಳಿಕೆ ನೀಡುತ್ತಿಲ್ಲ ಎಂದುಅವರು ಸರ್ಕಾರವನ್ನು ಪ್ರಶ್ನಿಸಿದರು.
ಮಂಜುಳಾ ನಾಯ್ಡು ಮಾತನಾಡಿ,ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದಾಗ ವಿಧಾನ ಪರಿಷತ್ ನಲ್ಲಿ ಚರ್ಚೆ ಮಾಡಿ ಎಲ್ಲ ಪಕ್ಷದವರನ್ನು ಒಳಗೊಂಡಂತೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ತಡೆಗಟ್ಟುವ ಸಮಿತಿ ರಚಿಸಿದ್ದರು.ಈಗಲೂ ಇಂತಹುದೇ ಸಮಿತಿ ರಚಿಸಿ,ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು.ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಆಘಾತಕಾರಿ.ಇದು ಇಡೀ ರಾಜ್ಯ ತಲೆತಗ್ಗಿಸುವ ಘಟನೆ.ಕೂಡಲೇ ಈ ಪ್ರಕರಣದ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.
‘ನಿರ್ಭಯ ಕೇಸ್ ನಡೆದಾಗ ನಮ್ಮ ನಾಯಕಿ ಸೋನಿಯಾ ಗಾಂಧಿ ಅವರು 376 ಕಾಯ್ದೆಗೆ ತಿದ್ದುಪಡಿ ತಂದು ಹೆಣ್ಣಿನ ಮೇಲಿನ ದೌರ್ಜನ್ಯ ನಡೆದರೆ ಅದು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಿ ಗಲ್ಲಿಗೇರಿಸುವ ಶಿಕ್ಷೆ ನೀಡುವಂತೆ ಕಾಯ್ದೆಯನ್ನು ಬಲಪಡಿಸಿದ್ದರು ಎಂದು ತಿಳಿಸಿದರು.
ಮಂಗಳೂರಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಾಗ,ಇದನ್ನು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಉಗ್ರಪ್ಪ ಅವರಿಗೆ ಹೇಳಿದಾಗ 11 ಫಾಸ್ಟ್ ಟ್ರ್ಯಾಕ್ ಕೋರ್ಟ್,5 ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು.ವಿಬ್ ಗಯಾರ್ ಶಾಲೆ,ಹಾಗೂ ವಿವಿಯಲ್ಲಿ ನಡೆದ ಘಟನೆ ವೇಳೆ ಅತ್ಯಾಚಾರ ಪ್ರಕರಣಕ್ಕೆ ಗೂಂಡಾ ಕಾಯ್ದೆಯನ್ನು ದೇಶದಲ್ಲೇ ಮೋದಲು ದಾಖಲಿಸಲಾಗಿತ್ತು.ಹೆಣ್ಣಿನ ಮೇಲೆ ಅತ್ಯಾಚಾರ ಆಗಿರುವಾಗ ಉಡಾಫೆ ಹೇಳಿಕೆ ನೀಡುತ್ತಿರುವ ಸಚಿವರಿಗೆ ನಾಚಿಕೆಯಾಗಬೇಕು.ನಾವು ಹೆಣ್ಣಿನ ಮೇಲಿನ ದೌರ್ಜನ್ಯ ನಡೆಯಲು ಕಾನೂನು ಬಲಪಡಿಸಿದರೆ, ಇವರು ಅದನ್ನು ಸಡಿಲ ಮಾಡಿ ಕೊಂಡು ಹೋಗುತ್ತಿದ್ದಾರೆ. ಇಂತಹ ಮನಸ್ಥಿತಿ ಇರುವ ಸರ್ಕಾರ ದೇಶದಲ್ಲಿ ಆಡಳಿತ ನಡೆಸಲು ನಾಲಾಯಕ್ಕಾಗಿಲ್ಲ ಎಂದು ಅವರು ಗೃಹ ಸಚಿವರ ವಿರುದ್ದ ಕಿಡಿಕಾರಿದರು.