ನಟಿಯರನ್ನ ಕಲಾವಿದರು ಎಂದು ಸ್ವೀಕರಿಸಿದ್ದಕ್ಕಿಂತ ಹೆಚ್ಚಾಗಿ ಗ್ಲ್ಯಾಮರಸ್ ಎಂಬ ನೆಲೆಗಟ್ಟಿನಿಂದಲೇ ಸಿನಿ ದುನಿಯಾ ಬಹುತೇಕ ಕಟ್ಟಿಕೊಡುತ್ತಾ ಬಂದಿವೆ. ಸಿನಿಮಾ ನಟಿಯರು ತಮ್ಮ ಪಾತ್ರಕ್ಕೆ ಜೀವ ತುಂಬುವುದಕ್ಕಿಂತ ಹೆಚ್ಚಾಗಿ ದೇಹ ಪ್ರದರ್ಶನದ ಮೂಲಕವೇ ಬಹುತೇಕ ಮೆಚ್ಚಿಸಲು ಒತ್ತಾಯಿಸುವುದು ದುರಂತ. ಇಂಥ ಒಂದು ಘಟನೆ ತಮ್ಮ ಮೇಲೂ ಪ್ರಯೋಗವಾದ ಬಗ್ಗೆ ನೆನೆದು ಹಿರಿಯ ನಟಿ ಹೇಮಾಮಾಲಿನಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಹುತೇಕ ಚಿತ್ರಗಳಲ್ಲಿ ಪಾತ್ರಗಳ ಅಗತ್ಯಕ್ಕಿಂತ ಹೆಚ್ಚಾಗಿ ದೇಹ ಪ್ರದರ್ಶನ ಕಂಡು ಬರ್ತವೆ. ಇದು ನನ್ನ ಮೇಲೆಯೂ ಹೇರಿಕೆಯಾಗಿತ್ತು ಎಂದು ಹಿರಿಯ ನಟಿ ಹೇಮಾಮಾಲಿನಿ ಹೇಳಿದ್ದಾರೆ. ನಿರ್ದೇಶಕನೊಬ್ಬ ಹೇಮಾ ಮಾಲಿನಿ ಸೀರೆ ಜಾರಿಸಲು ಯತ್ನಿಸಿದ ಪ್ರಸಂಗ ನೆನೆದು ಬೇಸರ ಗೊಂಡು ಮಾತನಾಡಿರುವ ವೀಡಿಯೋ ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಚಿತ್ರ ಒಂದರ ದೃಶ್ಯ ಕ್ಕೆ ಭಾವ ತುಂಬುವ ವೇಳೆ ನಿರ್ದೇಶಕ ನಟಿಗೆ ಸೀರೆಯ ಪಿನ್ ತೆಗೆಯಲು ಹೇಳಿದ್ದಾರೆ. ಇದರಿಂದ ವಿಚಲಿತರಾದ ನಟಿ ಪಿನ್ ತೆರೆದರೆ ರವಿಕೆ ದೇಹದ ಮೇಲೆ ನಿಲ್ಲಲ್ಲ ಜಾರಿ ಬಿಡುತ್ತದೆ ಎಂದು ಹೇಳಿದ್ರಂತೆ ನಟಿಯ ಉತ್ತರಕ್ಕೆ ನಕ್ಕ ನಿರ್ದೇಶಕ ನನಗೆ ಬೇಕಿರೋದು ಸಹ ಅದೇ ಎಂದು ಹೇಳಿದ್ದರಂತೆ. ಇದು ತೀರ ಅಸಹ್ಯ ಎನಿಸಿತ್ತು ಎಂದು ಇತ್ತೀಚೆಗೆ ನಡೆದ ಖಾಸಗಿ ಚಾನಲ್ ನ ಸಂದರ್ಶನ ಒಂದರಲ್ಲಿ ನಟಿ ಹೇಳಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಈಗಿನ ಕಾಲದ ನಿರ್ದೇಶಕರು ನಟ-ನಟಿಯರನ್ನು ಸುಂದರವಾಗಿ ತೋರಿಸುವುದಕ್ಕೆ ಶ್ರಮ ಪಡುವುದಿಲ್ಲ. ಬದಲಿಗೆ ಬೇರೆಯ ಕಸರತ್ತಿನಲ್ಲೇ ಉಳಿದುಬಿಡ್ತಾರೆ ಎಂದಿದ್ದಾರೆ. ಹೇಮಾಮಾಲಿನಿಗೆ ಬೇಡಿಕೆ ಇನ್ನೂ ಇದ್ರೂ ಯಾಕೆ ಸಿನಿಮಾ ಕಡೆ ಮುಖ ಮಾಡ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿನಿಮಾಗಳಲ್ಲಿ ಮತ್ತೆ ನಟಿಸುವುದಕ್ಕೆ ಇಷ್ಟವಿಲ್ಲ. ಈಗ ಸಿನಿಮಾ ಮಾಡುವುದು ದೊಡ್ಡ ಸವಾಲು ಎಂದಿದ್ದಾರೆ.




