MINISTER SANTOSH LAD PUCHING CART: ಹುಲ್ಲಿನ ಬಂಡಿಯನ್ನು ತಳ್ಳಿ ರೈತ ದಂಪತಿಗೆ ಸಹಾಯ ಮಾಡಿದ ಸಚಿವ ಸಂತೋಷ್ ಲಾಡ್: ಸ್ಥಳೀಯರು ಫುಲ್ ಖುಷ್

ಹುಬ್ಬಳ್ಳಿ: ಜನಪ್ರತಿನಿಧಿಗಳು ಹೇಗಿರಬೇಕು, ಹಾಗಿರಬೇಕು ಅಂತಿದ್ದವರಿಗೆ ಈ ಜನನಾಯಕ ಮಾದರಿಯಾಗಿದ್ದಾರೆ. ಕೇವಲ ಎಸಿ ಕಾರಿನಲ್ಲಿ ತೆರಳಿ, ಜನರ ಸಮಸ್ಯೆಗಳಿಗೆ ಸ್ಪಂದಿಸದೇ ತಿರುಗುವವರು ಅನೇಕರಿದ್ದಾರೆ. ಆದರೆ. ಹುಲ್ಲಿನ ಬಂಡಿಯನ್ನು ತಳ್ಳಲು ಸಾಧ್ಯವಾಗದಿದ್ದಾಗ, ಅದನ್ನು ತಾವೇ ಖುದ್ದಾಗಿ ತಳ್ಳಿ ರೈತನ ಮನೆಬಾಗಿಲಿಗೆ ಮುಟ್ಟಿಸಿದ ಸಚಿವ ಇಲ್ಲೊಬ್ಬರಿದ್ದಾರೆ.

ಕಲಘಟಗಿಯಲ್ಲಿ ಇಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸರಳತೆ ಕಂಡು ಗ್ರಾಮಸ್ಥರು ಫುಲ್ ಖುಷ್ ಆಗಿದ್ದು, ಅವರು ಅಹಂ ಇಲ್ಲದೆ ರೈತರಿಗೆ ನೆರವು ನೀಡಿದ್ದು, ಮಾತ್ರ ದೊಡ್ಡ ವಿಚಾರವೇ ಎಂದು ಜನರು ಚರ್ಚಿಸುತ್ತಿದ್ದಾರೆ.
ಇಂದು ಬೆಳಗ್ಗೆ ಎಂದಿನಂತೆ ಸಚಿವ ಸಂತೋಷ್ ಲಾಡ್ ಜಾಗಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವೃದ್ದ ರೈತ ದಂಪತಿ ಹುಲ್ಲಿನ ಬಂಡಿಯನ್ನು ತಳ್ಳಲಾಗದೇ ಕಷ್ಟಪಡುತ್ತಿದ್ದಾಗ ಅವರಿಗೆ ಸಹಾಯ ಮಾಡಿ, ಖುದ್ದು ಬಂಡಿಯನ್ನು ಸಚಿವರೇ ತಳ್ಳಿ ಅವರ ಮನೆಗೆ ಸೇರಿಸಿದ ಘಟನೆ ನಡೆದಿದೆ.
ಕಲಘಟಗಿಯ ಮಡಕಿಹೊನ್ನಳ್ಳಿ ಗ್ರಾಮದ ರೈತರಿಗೆ ಸಚಿವರು ಸಹಾಯ ಮಾಡಿದ್ದಾರೆ. ರೈತನ ಬಳಿ ಬಂಡಿ ತೆಗೆದುಕೊಂಡು ತಳ್ಳುತ್ತಾ ಓಡಿದ ಸಂತೋಷ್ ಲಾಡ್, ಜತೆಯಲ್ಲಿ ಜಾಗಿಂಗ್ ಮುಗಿಸಿದ್ದಾರೆ, ಕಲಘಟಗಿ ನಿವಾಸಕ್ಕೆ ಆಗಮಿಸಿದಾಗ ಎಂದಿನಂತೆ ಮಡಕಿಹೊನ್ನಳ್ಳಿ ಗ್ರಾಮದ ಬಳಿ ಸಚಿವ ಸೋತೋಷ್ ಲಾಡ್ ವಾಕಿಂಗ್ ಮಾಡುವ ಹವ್ಯಾಸ ಬೆಳಸಿಕೊಂಡಿದ್ದರು.

ಸಂತೋಷ್ ಲಾಡ್ ಸರಳತೆಗೆ ಗ್ರಾಮಸ್ಥರು ಫುಲ್ ಖುಷ್, ರೈತನಿಗೆ ನೆರವಾದ ಸಂತೋಷ್ ಲಾಡ್‌ ಬಗ್ಗೆ ಅವರ ಸ್ವಕ್ಷೇತ್ರ ಕಲಘಟಗಿ ಮತದಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ

More News