ಬೆಂಗಳೂರು : ಬೆಂಗಳೂರು ನಗರದ ಹೃದಯ ಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದ್ದು, ಪೊಲೀಸರು ಹಾರಿಸಿದ ಗುಂಡಿಗೆ ಖತರ್ನಾಕ್ ದರೋಡೆಕೋರನ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಖತರ್ನಾಕ್ ದರೋಡೆಕೋರ ಯಾಸರ್ (26) ಎಂಬಾತನೇ ಕಾಲಿಗೆ ಗುಂಡು ತಗುಲಿ ಆಸ್ಪತ್ರೆ ದಾಖಲಾಗಿದ್ದಾನೆ. ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಲೇಸ್ ಬಳಿ ಈ ಘಟನೆ ನಡೆದಿದ್ದು, ಶೇಷಾದ್ರಿಪುರಂ ಪೊಲೀಸರಿಗೆ ಬೇಕಿದ್ದ ಖತರ್ನಾಕ್ ಆಸಾಮಿ ಯಾಸರ್, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ರಾಬರಿ ಮಾಡುತ್ತಿದ್ದ.
ಈತನ ಬಂಧನಕ್ಕೆ ಪೊಲೀಸರು ಸಾಕಷ್ಟು ಕಸರತ್ತು ಮಾಡಿದ್ದರು ತಪ್ಪಿಸಿಕೊಳ್ಳುತ್ತಿದ್ದ, ಸುಮಾರು ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಆರೋಪಿ ಯಾಸರ್, ಸುಳ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿದ್ದಾನೆ.

ಅಪ್ರಾಪ್ತನಾಗಿದ್ದನಿಂದಲೇ ಸುಲಿಗೆ, ರಾಬರಿಯಲ್ಲಿ ನಿಪುಣನಾಗಿದ್ದ ಆರೋಪಿ, ಇಂದು ಬೆಳಗ್ಗೆ ಆರೋಪಿಯನ್ನ ಹಿಡಿಯಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಸಂದರ್ಭಗದಲ್ಲಿ ಪ್ಯಾಲೇಸ್ ರೋಡ್ ಬಳಿ ಪೊಲೀಸರ ಮೇಲೆ ಮರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಲು ಯತ್ನಿಸಿದಾಗ, ಪೊಲೀಸರು ಆತ್ಮರಕ್ಷಣೆಗೆ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಶೇಷಾದ್ರಿಪುರಂ ಇನ್ಸ್ ಪೆಕ್ಟರ್ ಗುಂಡು ಹಾರಿಸಿದ್ದು, ಸದ್ಯ ಈತನಿಗೆ ಚಿಕಿತ್ಸೆ ನೀಡಿ, ನಂತರ ವಿಚಾರಣೆ ನಡೆಸಲಾಗುವುದು ಎಂದು ತದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಶೇಷಾದ್ರಿಪುರಂ ಪೊಲೀಸರು ತಿಳಿಸಿದ್ದಾರೆ.




