Mangalamukhi Gang Arrest: ಸುಲಿಗೆಗೆ ಇಳಿದಿದ್ದ ಮಂಗಳಮುಖಿಯರ ಗ್ಯಾಂಗ್ ಅರೆಸ್ಟ್: ನಾಲ್ವರ ಬಂಧನ

ಬೆಂಗಳೂರು : ಬೆಳ್ಳಂಬೆಳಗ್ಗೆ ಸುಲಿಗೆ ಇಳಿತಿದ್ದ ಮಂಗಳಮುಖಿಯರ ಗ್ಯಾಂಗ್ ಅನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರು ಸಿಗ್ನಲ್ ಗಳಲ್ಲಿ ನಿಲ್ಲುತ್ತಿರಲಿಲ್ಲ. ಬದಲಾಗಿ ಬಸ್ ಸ್ಟಾಪ್, ರಸ್ತೆ ಬದಿ ನಡೆಯೋರೇ ಇವರ ತಾರ್ಗೇಟ್ ಆಗಿದ್ದರು. ಅವರು ಕೊಟ್ಟಷ್ಟು ಹಣ ಪಡೆಯದೇ, ಸುಲಿಗೆ ಮಾಡುತ್ತಿದ್ದರು ಎಂದು ಕೊಡುಗೆಹಳ್ಳಿ ಪೊಲೀಸರು ತಿಳಿಸಿದ್ದಾರೆ.


ಬೆಳಗ್ಗೆ 5 ಗಂಟೆಗೆ ಆಟೋ ಹತ್ತಿ, ರೌಂಡ್ಸ್ ಹಾಕಿ ಸುಲಿಗೆಗಳ ಮೇಲೆ ಸುಲಿಗೆ ಮಾಡುತ್ತಿದ್ದ ಈ ಗ್ಯಾಂಗ್ ನಲ್ಲಿ ಮೂವರು ಮಂಗಳಮುಖಿ ಮತ್ತು ಓರ್ವ ಅಟೋ ಡ್ರೈವರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಜಾನೆ 5 ಗಂಟೆಯಿಂದ 8 ಗಂಟೆವರೆಗೆ ಫೀಲ್ಡ್ ನಲ್ಲಿ ಆ್ಯಕ್ಟೀವ್ ಆಗಿರುತ್ತಿದ್ದ ಈ ಗ್ಯಾಂಗ್, ಬೆಳಗ್ಗೆ ಕೆಲಸಕ್ಕೆ ಹೋಗೋ ಟೆಕ್ಕಿಗಳು, ರಸ್ತೆಬದಿ ಹೋಗುವ ಜನರೇ ಇವರ ಟಾರ್ಗೆಟ್ ಆಗಿದ್ದರು. ಹಣ ಕೇಳೋ ನೆಪದಲ್ಲಿ ಮಾತಾಡಿಸಿ, ಅವರ ಬಳಿ ಇರೋದೆನ್ನೆಲ್ಲಾ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೃತ್ಯ ಎಸಗಿರೋ ತಂಡ, ಇತ್ತೀಚೆಗೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಆರೋಪಿಗಳು, ಈ ವೇಳೆ ರೆಡ್ ಹ್ಯಾಂಡ್ ಆಗಿ ಪೊಲೀಸರು ಗ್ಯಾಂಗ್ ಅನ್ನು ಹಿಡಿದಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

More News