ಸಿನಿಮೀಯ ರೀತಿಯಲ್ಲಿ ಪುಂಡರ ಗುಂಪಿನಿಂದ ವ್ಯಕ್ತಿಯ ಮೇಲೆ ಹಲ್ಲೆ

ಚಿತ್ರದುರ್ಗ : ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಆಟೋ ಚಾಲಕನ ಮೇಲೆ ಪುಂಡರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.
ಸಿನಿಮಿಯಾ ರೀತಿಯಲ್ಲಿ ಆಟೋವನ್ನು ಹಿಂಬಾಲಿಸಿ ಬಂದು ಸರ್ಕಾರಿ ಶಾಲೆ ಆವರಣದಲ್ಲಿ ಆಟೋ ಚಾಲಕ ಭೀಮಣ್ಣನ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮನ ಬಂದಂತೆ ಪುಂಡರ ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಹಿಂದೊಮ್ಮೆ ಅಜಯ್ ಮಮತ್ತು ಭೀಮಣ್ಣ ನಡುವೆ ಜಗಳ ನಡೆದಿತ್ತು, ಹಳೆ ಜಗಳದ ದ್ವೇಷ ಸಾಧಿಸಿ ಭೀಮಣ್ಣನ ಮೇಲೆ ಅಜಯ್ ಗುಂಪಿನವರಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಫಿಲಂ ಸ್ಟೈಲ್ ನಂತೆ ಬೈಕ್ ಗಳಲ್ಲಿ ಅಟೋವನ್ನು ಬೆನ್ನತ್ತಿ ಬಂದು ಪುಂಡರಿಂದ ಹಲ್ಲೆ ನಡೆಸಲಾಗಿದೆ.
ಆಟೋ ಚಾಲಕ ಭೀಮಣ್ಣಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

More News