ಬೆಂಗಳೂರಲ್ಲಿ ನಿನ್ನೆ ಹಾಡ ಹಗಲೇ ನಡೆದ ಡಬಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗಿದೆ. ಕೆಲಸದ ವೈಮನಸ್ಸಿನ ಕಾರಣ ಡಬಲ್ ಮರ್ಡರ್ ಆಯ್ತು ಎಂದು ಹೇಳಲಾಗಿತ್ತು. ಬಳಿಕ ಹಳೆ ಕಂಪನಿ ಮಾಲೀಕನ ಮೇಲೆಯೂ ಡೌಟ್ ಹುಟ್ಟಿತ್ತು. ಇದೀಗ ವ್ಯವಹಾರ, ಹಣಕ್ಕಾಗಿ ಅಲ್ಲ.. ಹುಡುಗಿಗಾಗಿ ಡಬಲ್ ಮರ್ಡರ್ ಆಗಿ ಹೋಗಿದೆ ಎಂಬ ಶಂಕೆ ವ್ಯಕ್ತವಾಗ್ತಿದೆ.
27ರ ಹರೆಯದ ಆರೋಪಿ ಶಬರೀಶ್ ಅಲಿಯಾಸ್ ಫಿಲಿಕ್ಸ್ ನೇತೃತ್ವದ ಗುಂಪು ನಿನ್ನೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು.
ಅಮೃತಹಳ್ಳಿ ಬಳಿಯ ಪಂಪಾ ಎಕ್ಸ್‌ಟೆನ್ಶನ್‌ನಲ್ಲಿರುವ ಖಾಸಗಿ ಕಂಪನಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅವರನ್ನು ಮಾರಕಾಸ್ತ್ರಗಳನ್ನು ಬಳಸಿ ಹತ್ಯೆಗೈದಿದ್ದಾರೆ. ಮೃತರನ್ನು ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಇಒ ವಿನು ಕುಮಾರ್ (40) ಮತ್ತು ಎಂಡಿ ಫಣೀಂದ್ರ ಸುಬ್ರಮಣ್ಯ (36) ಎಂದು ಗುರುತಿಸಲಾಗಿತ್ತು, ಪ್ರಾರಂಭದಲ್ಲಿ ಕೆಲಸ ವಿಚಾರಕ್ಕೆ ಕೊಲೆ ಮಾಡಲಾಯ್ತು ಎಂದಿದ್ದ ಕೇಸ್ ಇದೀಗ ಟ್ವಿಸ್ಟ್ ಪಡೆದುಕೊಂಡಿದೆ.

ಆರೋಪಿ ಫಿಲಿಕ್ಸ್, ಪೊಲೀಸರ ವಶದಲ್ಲಿರುವ ಕಂಪನಿ ಮಾಲೀಕ ಅರುಣ್ ಹಾಗೂ ಮೃತಪಟ್ಟ ಫಣೀಂದ್ರ ಸುಬ್ರಮಣ್ಯ ಈ ಮೊದಲು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅರುಣ್ ಮಾಲಿಕತ್ವದ ಕಂಪನಿಯಲ್ಲಿ ಫಣೀಂದ್ರ ಮ್ಯಾನೇಜರ್ ಆಗಿ ಕೆಲಸ ಮಾಡ್ತಿರ್ತಾರೆ.ಫಿಲಿಕ್ಸ್ ಟೀಂ ಬಾಯ್ ಆಗಿಕೆಲಸ ಮಾಡ್ತಿರ್ತಾನೆ. ಓರ್ವ ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಫಿಲಿಕ್ಸ್ ನನ್ನು ಕೆಲಸದಿಂದ ತೆಗೆಯಲಾಯ್ತಂತೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೃತ ಫಣೀಂದ್ರ ಮತ್ತು ಫಿಲಿಕ್ಸ್ ನಡುವೆ ಗಲಾಟೆ ಕೂಡ ಆಗಿತ್ತು ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ಹೊರ ಬಿದ್ದಿದೆ.

ಇನ್ನು ವಶಕ್ಕೆ ಪಡೆದ ಅರುಣ್ ವಿಚಾರಣೆ ವೇಳೆ, ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಫಣೀಂದ್ರ ನನ್ನ ನಡುವೆ ಒಂದೆರಡು ವಿಚಾರಕ್ಕೆ ಅಷ್ಟೇ ವೈಮನಸ್ಸು ಇರ್ಲಿಲ್ಲ. ಫಣೀಂದ್ರ ತನ್ನ ಪತ್ನಿಗೆ ವಿಚ್ಚೇದನ ನೀಡಿ ನಾನು ಪ್ರೀತಿ ಮಾಡ್ತಿದ್ದ ಹುಡುಗಿಗೆ ಪದೇ ಪದೇ ಕರೆ ಮಾಡೋದು, ಹಿಡಿಸದಿದ್ರೂ ಮಾತಾಡಿಸಿ ಕಿರಿಕಿರಿ ಮಾಡ್ತಿದ್ದ. ಹೊಸದಾಗಿ ತೆರೆದ ಕಂಪನಿಗೆ ಕೆಲಸಕ್ಕೆ ಬಾ ಎಂದು ಫೋರ್ಸ್ ಮಾಡ್ತಿದ್ದ ಎಂದು ಅಮೃತ ಹಳ್ಳಿ ಪೊಲೀಸರು ನಡೆಸಿದ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಯುವತಿ ಬನ್ನೇರುಘಟ್ಟ ಕಂಪನಿಯಲ್ಲೇ ಸಧ್ಯ ಕೆಲಸ ಮಾಡ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.




