ಹುಬ್ಬಳ್ಳಿ: ಮುಂದೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿಗೆ ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವಾಯುವ್ಯ ಸಾರಿಗೆ ಸಂಸ್ಥೆ ಬಸ್ಸಿನ ಹಿಂದಿನ ಗಾಜು ಒಡೆದು ಪುಡಿಪುಡಿಯಾಗಿರುವ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ.

ಚಿಗರಿ ಬಸ್ ಒಂದಿಲ್ಲೊಂದು ರೀತಿಯಲ್ಲಿ ಅಪಘಾತಕ್ಕೆ ಸಿಲುಕುತ್ತಿರುವುದು ನಿಜಕ್ಕೂ ಜನರಲ್ಲಿ ಆತಂಕದ ಭಾವನೆ ಹುಟ್ಟು ಹಾಕಿದೆ. ಎಲ್ಲೆಂದರಲ್ಲಿ ಚಿಗರಿ ಬಸ್ ಡಿಕ್ಕಿ ಹೊಡೆಯುವ ಪ್ರಸಂಗಗಳನ್ನು ನೋಡಿದರೇ ಬ್ರೇಕ್ ಸಮಸ್ಯೆಯೋ ಏನೋ ಅರ್ಥವಾಗದಂತಾಗಿದೆ. ಇನ್ನೂ ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇನ್ನೂ ಮಾರ್ಗಮಧ್ಯದಲ್ಲಿ ಇಂತಹದೊಂದು ಅಪಘಾತ ಸಂಭವಿಸಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.




