Actor Ravindra Mahajani Found Dead In Pune: ದುರಂತ ಅಂತ್ಯ ಕಂಡ ನಟ: ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆ

ಮರಾಠಿ ಚಿತ್ರರಂಗದ ವಿನೋದ್ ಖನ್ನಾ ಎಂದೇ ಪ್ರಸಿದ್ದ ರಾಗಿದ್ದ 77 ವರ್ಷದ ರವೀಂದ್ರ ಮಹಾಜನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮರಾಠಿ ಮಾತ್ರವಲ್ಲದೆ, ಗುಜರಾತಿ ಸಿನಿಮಾಗಳಲ್ಲೂ ನಟಿಸಿದ್ದ ರವೀಂದ್ರ ಅವರು 70 ರಿಂದ 80 ರ ದಶಕದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದರು‌. ಸಿನಿಮಾ ಬಳಿಕ ಗ್ರಾಮಕ್ಕೆ ಶಿಪ್ಟ್ ಆಗಿದ್ದ ರವೀಂದ್ರರವರು, ಪುಣೆಯ ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿನ ಪ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಮೂರು ದಿನಗಳ ಹಿಂದೆ ಪ್ಲ್ಯಾಟ್ ನಿಂದ ದುರ್ವಾಸನೆ ಬಂದ ಕಾರಣ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಮಾಹಿತಿ ಪಡೆದು‌ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮೃತ ದೇಹ ಪತ್ತೆಯಾಗಿದೆ.

ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಕೊಳೆತ ಸ್ಥಿತಿಯಲ್ಲಿ ರವೀಂದ್ರರವರ ದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡು ಮೂರು ದಿನವಾಗಿದ್ದರೂ ನಟನ ಆತ್ಮಹತ್ಯೆ ವಿಚಾರ ಯಾರಿಗೂ ತಿಳಿದಿಲ್ಲ. ಆತ್ಮಹತ್ಯೆ ಗೆ ಒಂಟಿತನ, ವಯೋ ಸಹಜ ಸಮಸ್ಯೆ ಯಿಂದ ಬೇಸತ್ತು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಮೇಲ್ನೋಟಕ್ಕೆ ಕಂಡು ಬಂದಿದೆ.

70-80 ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದ ರವೀಂದ್ರ ಅವ್ರ ದಿನಗಳೇನು ಅಷ್ಟು ಚನ್ನಾಗಿ ಇರಲಿಲ್ಲ. ಪ್ರಾರಂಭ ದಲ್ಲಿ ಒಂದೆರಡು ಸಿನಿಮಾದಲ್ಲಿ ನಟಿಸಿದ ಬಳಿಕ
ವೂ ಆರ್ಥಿಕವಾಗಿ ತೊಂದರೆ ಎದುರಿಸಿದರು. ಮತ್ತೇ ಬದುಕಿನ ಬಂಡಿಯನ್ನು ದಾರಿಗೆ ತರಲು ಕೆಲ ವರ್ಷಗಳ ಕಾಲ ಟ್ಯಾಕ್ಸಿ ಓಡಿಸುತ್ತಿದ್ದರು. ನಂತರ ವಾಪಸ್ ಸಿನಿಮಾ ಕ್ಷೇತ್ರಕ್ಕೆ ಬಂದು ಜನಪ್ರಿಯತೆ ಪಡೆದ ಚೇತನ ದುರಂತ ಅಂತ್ಯ ಕಂಡಿದ್ದಾರೆ. ನಟನ ನಿಧನಕ್ಕೆ ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ.

More News