PSI SCAM: ಶೀಘ್ರದಲ್ಲೇ ಪಿಎಸ್ ಐ ಪರೀಕ್ಷೆ..?

ಬೆಂಗಳೂರು: ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಗಳ ಕೊರತೆ ಇದೆ ಆದಷ್ಟು ಶೀಘ್ರದಲ್ಲೇ ಪಿಎಸ್ ಐ ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

502 ಪಿಎಸ್ ಐ ಹಗರಣ ವಿಚಾರಣೆ ನಡೆಸಿದ್ದ ಅಂದಿನ ಬಿಜೆಪಿ ಸರ್ಕಾರ ಒಂದಷ್ಟು ತನಿಖೆ ನಡೆಸಿ, ಕೆಲವರನ್ನು ಗುರುತಿಸಿ ಕಾನೂನಿನ ಚೌಕಟ್ಟಿಗೆ ಒಳಪಡಿಸಿತ್ತು‌. ಆ ತನಿಖೆ ತೀರ್ಪು ಕೋರ್ಟ್ ನಲ್ಲಿ ಪೆಂಡಿಂಗ್ ಇದೆ. 502 ಪಿಎಸ್ ಐ ಹುದ್ದೆ ಕರೆ ನೀಡಿದ ಬೆನ್ನಲ್ಲೇ 400 ಸಬ್ ಇನ್ಸ್ಪೆಕ್ಟರ್ ಗಳ ಹುದ್ದೆಗೆ ಅರ್ಜಿ ಆಹ್ವಾನ ನೀಡಿದ್ದು, 502 ಪಿಎಸ್ ಐ ಹಗರಣ ಹಿನ್ನಲೆ ಕರೆಯಬೇಕಿದ್ದ 400 ಹುದ್ದೆ ಕೂಡ ಹೋಲ್ಡ್ ನಲ್ಲಿ ಇದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಕೋರ್ಟ್ ತೀರ್ಪಿನ ಬೆನ್ನಲ್ಲೇ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಹಗರಣದ ಕುರಿತು ತನಿಖೆ ನಡೆಯುತ್ತಿದೆ. ಮುಂದೆ ನೇಮಕಾತಿ ಹೇಗೆ ಮಾಡ್ಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಸರ್ಕಾರ ಪುನರ್ ಪರೀಕ್ಷೆ ಗೆ ಆದೇಶ ಮಾಡಿತ್ತು. ಆದ್ರೆ ಅದಕ್ಕೆ ಅಭ್ಯರ್ಥಿ ಗಳೇ ಹೋಗಿ ಸ್ಟೇ ತೆಗೆದುಕೊಂಡಿದ್ದಾರೆ. ಸ್ಟೇ ವೆಕೇಟ್ ಆಗ್ಬೇಕು. ಇಲ್ದಿದ್ರೆ, ಹೈಕೋರ್ಟ್ ನಿಂದ ಯಾವ ರೀತಿ ಮಾಡ್ಬೇಕೆಂದು ಡೈರೆಕ್ಷನ್ ಬರ್ಬೇಕು. ಅವ್ರು ನಮ್ಮನ್ನೇ ಏನು ಮಾಡ್ಬಹುದೆಂದು ಕೇಳಿದ್ದಾರೆ. ನಮ್ಮ ಅಡ್ವೋಕೆಟ್ ಜನರ್ ಅವರು, ನಾವು ಚರ್ಚೆ ಮಾಡಿದ ಅಭಿಪ್ರಾಯವನ್ನು ಶೀಲ್ಡ್ ಕವರ್ ನಲ್ಲಿ ಕಳಿಸಿ ಕೊಟ್ಟಿದ್ದಾರೆ. ಕೋರ್ಟ್ ನಿಂದ ಮುಂದಿನ ಆದೇಶ ಬಂದ ಕೂಡ್ಲೇ ಅದರ ಕ್ರಮ ಕೈಗೊಳ್ತೆವೆ. ಬಹಳ ತ್ವರಿತಗತಿಯಲ್ಲಿ ನೇಮಕಾತಿ ಆಗ್ಬೇಕಿದೆ. ನಮ್ಮ ಇಲಾಖೆಯಲ್ಲಿ ಪಿಎಸ್ ಐ ಗಳ ಕೊರತೆ ಇದೆ. ಆದಷ್ಟು ಶೀಘ್ರದಲ್ಲೇ ಪರೀಕ್ಷೆ ಮಾಡುವ ಚಿಂತನೆ ಇದೆ ಎಂದರು.

More News