Youth Naked And Assault Incident: ಯುವಕ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಮತ್ತೆ ಇಬ್ಬರ ಬಂಧನ: ಪಾಲಿಕೆ ಸದಸ್ಯೆ ಪುತ್ರನ ಬಂಧನ

ಹುಬ್ಬಳ್ಳಿ : ಯುವಕನನ್ನು ಬೆತ್ತಲೆಗೊಳಿಸಿ ಹಾಗೂ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಪಾಲಿಕೆ ಸದಸ್ಯೆ ಮಂಜುಳಾ ಜಾಧವ್ ರ ಮತ್ತೋರ್ವ ಪುತ್ರ ಅಭಿಷೇಕ್ ಜಾಧವ್ ಬಂಧನಕ್ಕೊಳಗಾಗಿದ್ದಾನೆ. ಹಾಗೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ರಾಹುಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಗಣೇಶ್ ಜಾಧವ್ ನನ್ನು ಬಂಧಿಸಿದ್ದ ಪೊಲೀಸರು, ಗಣೇಶ್ ಜಾಧವ್ ಮತ್ತು ಅಭಿಷೇಕ್ ಜಾಧವ್ ಪಾಲಿಕೆ ಸದಸ್ಯೆ ಮಂಜುಳಾ ಪುತ್ರರಾಗಿದ್ದಾರೆ. ತಂದೆ ಶ್ಯಾಮ್ ಜಾಧವ್ ಕೂಡ ರೌಡಿಶೀಟರ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳಾದ ಅಭಿಷೇಕ್ ಜಾಧವ್, ಗಣೇಶ್ ಜಾಧವ್ ಸಹ ರೌಡಿಶೀಟರ್ ಗಳಾಗಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಅಭಿಷೇಕ್ ಅವರನ್ನು ಗಡಿಪಾರು ಮಾಡಲಾಗಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಬಂಧಿತರ ಸಂಖ್ಯೆ ಏಳಕ್ಕೆ ಏರಿಕ್ಕೇರಿದೆ. ಇನ್ನು ಅನೇಕ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಸಂತ್ರಸ್ತ ಯುವಕನನ್ನು ಮತ್ತೆ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

More News