Actress Roopa Rayappa hot photoshoot: ಅಯ್ಯೋ ಇವ್ರೆನಾ KGF ಚಿತ್ರದಲ್ಲಿನ ತಾಯಿ ಪಾತ್ರಧಾರಿ..!

ಸಿನಿಮಾ ದುನಿಯಾದಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾದಲ್ಲಿನ ಪಾತ್ರಧಾರಿಗಳು ಯಾರಿಗೆ ಗೊತ್ತಿಲ್ಲ ಹೇಳಿ..? ದೊಡ್ಡದೊಂದು ಕೋಟೆ.. ಆ ಕೋಟೆಯೊಳಗೆ ಕಾಲಿಡೋ ಒಬ್ಬ ಸಾಮಾನ್ಯ ಹುಡುಗನ ಸುತ್ತ ಸುತ್ತಿಕೊಳ್ಳೋ ಕಥೆಗೆ ಸಿನಿ ಪ್ರೇಮಿಗಳು ಮರುಳಾಗಿ ಬಿಟ್ಟಿದ್ದರು.
ಕೆಜಿಎಫ್ ನ ಒಂದೊಂದು ಕಥೆಯೂ ಎದೆಯ ಅಂತರಾಳಕ್ಕೆ ಇಳಿದು ಕಲುಕಿತ್ತು.

ಅದರಲ್ಲೂ ಹೆಣ್ಣು ಮಗುವನ್ನು ಹೆತ್ತು, ಹೆಣ್ಣು ಮಗು ಅನ್ನೋ ಕಾರಣಕ್ಕೇ ಮಗುವನ್ನು ಕೊಂದು ಬಿಟ್ಟಾರು‌ ಎಂಬ ತಾಯಿ ಪಾತ್ರಧಾರಿಯಾಗಿದ್ದ ರೂಪಾ ರಾಯಪ್ಪ ಆಕ್ರಂಧನ ಎಲ್ಲರ ಕರುಳ ಬಳ್ಳಿಗೂ ಚುರುಕಿಟ್ಟಿತ್ತು. ಕೆಜಿಎಫ್ ಚಿತ್ರದಲ್ಲಿ ಕಂಪ್ಲೀಟ್​ ಡಿ-ಗ್ಲಾಮರ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದ ನಟಿ ರೂಪಾ ರಾಯಪ್ಪ ಈಗ ಫುಲ್ ಹಾಟ್.. ಹ್ಯಾಂಡ್ ಹಾಟ್..

ಕೆಜಿಎಫ್ ಚಿತ್ರ ಭಾರತೀಯ ಚಿತ್ರರಂಗವನ್ನು ಎಲ್ಲೆಡೆ ದೊಡ್ಡದಾಗಿ ಪರಿಚಯಿಸಿದ್ದಲ್ಲದೇ, ಚಿತ್ರದ ಬಹುತೇಕ ಕಲಾವಿದರಿಗೆ ಹೊಟ್ಟೆ ಪಾಡಿನ ದಾರಿಯೂ ಕೊಡಿಸಿಬಿಟ್ಟಿತ್ತು. ಕೆಜಿಎಫ್ ಸಿನಿಮಾ ಬಳಿಕ ಬಹುತೇಕ ಕಲಾವಿದರು ಭಾರೀ ಅವಕಾಶ ಗಿಟ್ಟಿಸಿಕೊಂಡು ಮುನ್ನುಗ್ತಿದ್ದಾರೆ.
ಇತ್ತ ಕೆಜಿಎಫ್ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ರೂಪಾ ರವಿಚಂದ್ರನ್ ನಟನೆಯ ‘ಜಡ್ಜ್​ಮೆಂಟ್’​ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಜೊತೆಗೆ ವಾರಕ್ಕೊಂದು ಹಾಟ್ ಫೋಟೋ ಶೂಟ್ ಮಾಡಿಸೋ ಮೂಲಕ ಭಾರೀ ಸದ್ದು ಮಾಡ್ತಿದ್ದಾರೆ.

ಇತ್ತೀಚೆಗೆ ಅಷ್ಟೇ ಬೋಲ್ಡ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದ ಚೆಲುವೆ ರೂಪಾ ಮತ್ತೊಮ್ಮೆ ಫುಲ್ ಗ್ಲಾಮರ್​ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

ಹಾಟ್ ಫೋಟೋ ಶೂಟ್ ಕಂಡ ಅಭಿಮಾನಿಗಳು ಅಯ್ಯೋ ಇವ್ರೆನಾ ಕೆಜಿಎಫ್ ಚಿತ್ರದ ತಾಯಿ ಎಂದು ನಿಬ್ಬೆರಗಾಗಿದ್ದಾರೆ. ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ರೂಪಾ ರಾಯಪ್ಪ ಅವ್ರದೇ ಫೋಟೋ ಸದ್ದು ಮಾಡ್ತಿದೆ.

#rooparayappa #vravichandran #kgf #movie #film #hotphotoshoot

More News