Opposition Party Leaders Meeting: ಲೋಕ ಯುದ್ಧಕ್ಕೆ ಮೋದಿ ವಿರೋಧಿ ಕೂಟ ಸಜ್ಜು: ವಿರೋಧ ಪಕ್ಷವಾಗಲೂ ಯೋಗ್ಯರಲ್ಲದವರಿಂದ ಸಭೆ ಎಂದು ಕುಟುಕಿದ ಕೇಸರಿ

ಬೆಂಗಳೂರು: ದೇಶದಲ್ಲಿ ದೃವೀಕರಣ ರಾಜಕಾರಣಕ್ಕೆ ದೊಡ್ಡದೊಂದು ವೇದಿಕೆ ಸಜ್ಜಾಗಿದೆ.. ಒಂದೆಡೆ ಮಹಾ ಮೈತ್ರಿಯ ಸಭೆಗೆ ದೇಶದ ವಿಪಕ್ಷಗಳು ಸೇರಿದರೆ ಅದಕ್ಕೆ ಸೆಡ್ಡು ಹೊಡೆಯಲು ಎನ್ ಡಿಎ ನಾಳೆ ದೆಹಲಿಯಲ್ಲಿ ಒಕ್ಕೂಟ ಸಭೆ ನಡೆಸಲು ನಿರ್ಧರಿಸಿದ್ದು , ಬಿಜೆಪಿ ಚಿಂತನೆಯ ಜನರನ್ನ ತನ್ನತ್ತ ಸೆಳೆಯೋ ಕಸರತ್ತು ಮಾಡ್ತಿದೆ.

“ವಿರೋಧ ಪಕ್ಷವಾಗಲೂ ಯೋಗ್ಯರಿಲ್ಲದವರು ರಾಹುಲ್ ಗಾಂಧಿ ನೇತೃತ್ವದಲ್ಲಿ ಬರ್ತಿದ್ದಾರೆ”

ಇನ್ನು ಕಾಂಗ್ರೆಸ್ ನ ಮಹಾ ಮೈತ್ರಿ ವಿರುದ್ಧ ಕುಟುಕಿದ ಮಾಜಿ ಸಚಿವ ಛಲವಾದಿ ನಾರಾಯಣ ಸ್ವಾಮಿ, ಈ‌ ಮಹಾಘಟನಬಂದನ್ ಯಾವ ಕಾರಣಕ್ಕೆ ಅನ್ನೋದು‌ ಅವರಿಗೇ ಗೊತ್ತಿಲ್ಲ.‌ಮೋದಿಜೀ ಅವರನ್ನ‌ ಸೋಲಿಸಬೇಕು ಅನ್ನೋ‌ ನಿಟ್ಟಿನಲ್ಲಿ ‌ಸಭೆ ಮಾಡ್ತಿದಾರೆ. ಯುನೈಟೆಡ್ ದಿ ಸ್ಟ್ಯಾಂಡ್ ಎಂಬ ಪೋಸ್ಟ್ ಹಾಕಿದ್ದಾರೆ. ಇಲ್ಲಿ‌ ಸೇರಿರೋ ಎಲ್ಲರ ಸಿದ್ಧಾಂತ, ತತ್ವಗಳು ಬೇರೆ.‌ ಹೀಗಿರುವಾಗ ಹೇಗೆ ಒಂದಾಗ್ತಾರೆ? ಎಂದು ಪ್ರಶ್ನೆ ಹಾಕಿದರು.

ಮುಂದುವರೆದು ಮಾತನಾಡಿದ ಅವರು, ಇವರಿಗೆ‌ ನೀತಿ ಸಿದ್ಧಾಂತಗಳೇ‌ ಇಲ್ಲ. ಮುಫ್ತಿ, ಮೊಹಮ್ಮದ್ ಬರ್ತಿದಾರೆ, ಅವರ ಸಿದ್ಧಾಂತ ದೇಶ ಒಡೆಯೋದು.ಇವೆರೆಲ್ಲರೂ ಕುತಂತ್ರ ಮಾಡಲು ಬರುತ್ತಿದ್ದಾರೆ. ಮಳೆಯಲ್ಲಿ‌ ಅಣಬೆಗಳ ರೀತಿ‌ ಹುಟ್ಟುಕೊಂಡಿದಾರೆ.. ವಿರೋಧ ಪಕ್ಷವಾಗಲೂ ಯೋಗ್ಯರಿಲ್ಲದವರು ರಾಹುಲ್ ಗಾಂಧಿ ನೇತೃತ್ವದಲ್ಲಿ ಬರ್ತಿದ್ದಾರೆ..‌ಅವರು ಸಂಸದರೂ ಅಲ್ಲ. ಅನರ್ಹಗೊಂಡಿದ್ದಾರೆ. ಈ ದೇಶವನ್ನ ಹರಾಜಿಗಿಡೋ ಪ್ರಯತ್ನ ಮಾಡ್ತಿದಾರೆ.. ಅಲ್ಲಿ ವೆಚ್ಚವಾಗುವ ಒಂದೊಂದು ರೂಪಾಯಿಯೂ ಸರ್ಕಾರದ ಖರ್ಚಾಗಿದ್ದರೆ ತಿರುಗಿಬೀಳ್ತೇವೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಕಮಲ ದಳ ದೋಸ್ತಿ ನಿಜವಾ ಎಂಬ ಪ್ರಶ್ನೆಗೆ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಜಿಟಿ ದೇವೇಗೌಡ, ಎನ್ ಡಿ ಎ ಮೈತ್ರಿ ಬಗ್ಗೆ ನಮ್ಮ ನಾಯಕರು ಮುಕ್ತವಾಗಿ ಮಾತಾಡಿದ್ದಾರೆ. ಅವರಿಗೆ ಸಭೆಗೆ ಆಹ್ವಾನ‌ ಬಂದಿಲ್ಲ.‌ನಾನು ಮೀಡಿಯಾದಲ್ಲಿ ನೋಡಿದ್ದೇನೆ. ಈ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ಆಗಿಲ್ಲ. ಆ ತರ ತೀರ್ಮಾನ ತೆಗೆದುಕೊಂಡಾಗ ಅದರ ಬಗ್ಗೆ ಮಾತಾಡ್ತೀನಿ. ಸುಮ್ಮನೆ ಏನನ್ನೂ ಹೇಳೊಕೆ ಆಗೊಲ್ಲ. ನಮ್ಮ ನಾಯಕರ ಜೊತೆ ತೀರ್ಮಾನ ತೆಗೆದುಕೊಂಡು ಶಾಸಕರನ್ನ ಕರೆದು ಸಭೆ ಮಾಡಿದ ಬಳಿಕ ನಿರ್ಧಾರ ಮಾಡ್ತೀವಿ ಎಂದು ತಿಳಿಸಿದರು.

ಮಹಾ ಮೈತ್ರಿ ವಿರುದ್ಧ ಕುಟುಕಿದ ಮಾಜಿ ಸಚಿವ
ಆರ್ ಅಶೋಕ್, ಸರ್ಕಾರ ನಡೆಸೋರು ಹೇಗೆ ಅಧಿಕಾರ ದುರುಪಯೋಗ ಮಾಡ್ತಾರೆ ಅನ್ನೋದು ನೋಡ್ತಿದ್ದೀನಿ. ಇದೊಂದು ಫೊಟೊ ಶೋ ಅಷ್ಟೇ. ದಾರಿಯುದ್ದಕ್ಕೂ ಪ್ಲೆಕ್ಸ್ ಗಳನ್ನ ನೋಡಿದ್ದೇನೆ. ಯುಪಿಎ ಲೀಡರ್ಸ್ ಬೆಂಗಳೂರಿಗೆ ಬಂದಿದ್ದಾರೆ. ಇದು‌ ಪೊಟೊ‌ ಶೋ ಅಷ್ಟೇ. ಎಲ್ಲರೂ ಕೈ ಎತ್ತಿ ಪೊಟೋ ಶೂಟ್ ಮಾಡ್ತಾರೆ ಹೋಗ್ತಾರೆ.ಸಿದ್ದಾಂತ ಗಳಿಲ್ಲಾ ಅವರಿಗೆ.‌ ತಮಿಳು ನಾಡು, ವೆಸ್ಟ್ ಬೆಂಗಾಲ್, ಕೇರಳದಲ್ಲಿ ಜಬ್ಬೊರಿಗೊಬ್ಬರು ಜಗಳ ಆಡ್ತಾರೆ. ಮೋದಿ ವಿರುದ್ದ ನಾವಿದ್ದೀವಿ ಅನ್ನೊ ಅಜೆಂಡ ಅಷ್ಟೇ ಅವರಿಗೆ
ಇರೋದು. ದೇಶದ ಬಡವರಿಗೆ ಮೋದಿ‌ ಏನು ಅಂತ ಗೊತ್ತಿದೆ.‌ಮೋದಿ ಅವರಿಂದ ವಿಶ್ವಮಟ್ಟದಲಿ ಹೆಸರು ಬಂದಿದೆ.‌ ಇವರದ್ದೆಲ್ಲಾ ಪೊಟೊ ಶೋ ಅಷ್ಟೇ ಸಭೆಯಿಂದ ಏನು ಉಪಯೋಗ ಆಗೊಲ್ಲ ಎಂದು ಟೀಕಿಸಿದರು

More News