Oommen Chandy Passes Away: ಉಮಾನ್ ಚಾಂಡಿ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ, ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ: ಡಿಕೆಶಿ ಸಂತಾಪ

ಬೆಂಗಳೂರು: ದೇಶದ ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿ ಕೇರಳ ಮಾಜಿ ಸಿಎಂ ಉಮಾನ್ ಚಾಂಡಿ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ, ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ವಿದ್ಯಾರ್ಥಿ ನಾಯಕರಿಂದ ಹಿಡಿದು ಮುಖ್ಯಮಂತ್ರಿ ಸ್ಥಾನದವರೆಗೂ ಬೆಳೆದವರು. ಸುಮಾರು 10 ಬಾರಿ ಶಾಸಕರಾಗಿ ಆಯ್ಕೆಯಾಡವರು l. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅನೇಕ ರಾಜ್ಯಗಳ ಉಸ್ತುವಾರಿ ಜವಾಬ್ದಾರಿ ನಿಭಾಯಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ನಮ್ಮ ನಾಯಕರುಗಳು ಅವರ ಅಂತಿಮ ದರ್ಶನ ಮಾಡಲಿದ್ದು, ಇಂದಿನ ವಿರೋಧ ಪಕ್ಷಗಳ ಒಕ್ಕೂಟ ಸಭೆಯಲ್ಲಿ ಕೇರಳದ ಅನೇಕ ನಾಯಕರು ಭಾಗವಹಿಸಲು ಆಗಮಿಸಿದ್ದು, ರಾಹುಲ್ ಗಾಂಧಿ ಅವರು ಕೂಡ ಕೇರಳದ ಪ್ರತಿನಿಧಿಯಾಗಿದ್ದಾರೆ ಎಂದರು.

ವಿರೋಧ ಪಕ್ಷಗಳ ಸಭೆಗೆ ಅಧಿಕಾರಿಗಳ ಬಳಕೆ ಕುರಿತು ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ನಾನು ಕುಮಾರಸ್ವಾಮಿ ಅವರ ಟೀಕೆಗೆ ಉತ್ತರ ನೀಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಾಯಕರು ರಾಜ್ಯಕ್ಕೆ ಭೇಟಿ ನೀಡಿದಾಗ ಅವರನ್ನು ರಾಜ್ಯದ ಅತಿಥಿ ಎಂದು ಪರಿಗಣಿಸಲಾಗುವುದು. ಶಿಷ್ಟಾಚಾರದ ಭಾಗವಾಗಿ ಯಾರನ್ನು ನಿಯೋಜಿಸಬಹುದೊ ಅವರನ್ನು ನಿಯೋಜಿಸಿದ್ದೇವೆ. ಕೆಲವು ಗಣ್ಯರನ್ನು ನಾನು ಹಾಗು ಕೆಲ ಸಚಿವರು ಸ್ವಾಗತಿಸಿದ್ದೇವೆ. ಮತ್ತೆ ಕೆಲವು ನಾಯಕರನ್ನು ಅಧಿಕಾರಿಗಳು ಸ್ವಾಗತಿಸಿದ್ದಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಅವರು ಎನ್ ಡಿ ಎ ಮೈತ್ರಿಕೂಟದ ಆಹ್ವಾನಕ್ಕೆ ಕಾಯುತ್ತಿರುವುದಾಗಿ ಹೇಳಿದ್ದಾರೆ. ಅವರಿಗೆ ಸುದ್ದಿಯಲ್ಲಿ ಇರಲು ವಿಷಯ ಬೇಕು, ಅದಕ್ಕೆ ಟೀಕೆ ಮಾಡುತ್ತಾರೆ. ಅವರಿಗೆ ಒಳ್ಳೆಯದಾಗಲಿ” ಎಂದು ತಿಳಿಸಿದರು.

More News