MILK PRICE HIKE: ಮತ್ತೆ ಬೆಲೆ ಏರಿಕೆ ಬಿಸಿ: ಅಗಸ್ಟ್ 1 ರಿಂದ ಪ್ರತಿ ಲೀಟರ್ ವೊಂದಕ್ಕೆ 3 ರೂಪಾಯಿ ಏರಿಕೆ

ಬೆಂಗಳೂರು : ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಬರೆ ಎಳೆಯುವ ಸರದಿ ರಾಜ್ಯ ಸರ್ಕಾರದ್ದಾಗಿದೆ. ಜನಸಾಮಾನ್ಯರ ಅತೀ ಮುಖ್ಯವಾದ ಹಾಲಿನ ದರವನ್ನು ಏರಿಸಲು ಇಂದು ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಅಗಸ್ಟ್ 1 ರಿಂದ ಲೀಟರ್ ವೊಂದಕ್ಕೆ 3 ರೂಪಾಯಿ ಏರಿಕೆ ಕಾಣಲಿದ್ದು, ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆದು ಜಾರಿ ಮಾಡಲಾಗುವುದು ಎಂದು ಇಂದು ನಡೆದ ಹಾಲು ಒಕ್ಕೂಟ ಸಭೆಯಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ರಾಜ್ಯದಲ್ಲಿನ ಎಲ್ಲಾ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಿದ ನಂತರ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಈ ವಿಚಾರ ಸ್ಪಷ್ಟಪಡಿಸಿದರು.

ಇದೀಗ ಕೇವಲ ಹಾಲಿನ ದರ ಜಾಸ್ತಿ ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಹಾಲಿನ ಉಪ ಉತ್ಪನ್ನಗಳ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹಾಲಿನ ಪುಡಿ ದರ ಏರಿಕೆಗೂ ಪ್ರಸ್ತಾವನೆ ಇಡಲಾಗಿದೆ ಎಂದು ವಿವರಿಸಿದರು.
ಸಿಎಂ ಗೆ ಭೇಟಿ ಮಾಡಿ, ರೈತರು, ಉತ್ಪಾದಕರಿಗೆ ಅನುಕೂಲವಾಗುವಂತೆ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದೇವು, ಅತಿ ಕಡಿಮೆ ಬೆಲೆ ಹಾಲು ಮಾರಾಟ ನಮ್ಮ ರಾಜ್ಯದಲ್ಲಿ ಆಗುತ್ತೆ, ಎಲ್ಲಾ ಅಧ್ಯಕ್ಷರ, ಕೆಎಂಎಫ್ ಪದಾದಿಕಾರಿಗಳು ಸಿಎಂ ಮೇಲೆ ಹಾಲಿನ ದರ ಹೆಚ್ಚಳಕ್ಕೆ ಒತ್ತಡ ಹಾಕಿದ್ದಾರೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.

ಪ್ರತಿನಿತ್ಯ 94 ಲಕ್ಷ ಲೀಟರ್ ಗೂ ಹೆಚ್ಚು ಹಾಲು ಉತ್ಪಾದನೆಯಾಗಲಿದೆ. ಚಾಮರಾಜನಗರದಲ್ಲಿ ಬೈ ಪ್ರಾಡೆಕ್ಟ್ ಗಳ ಉದ್ಘಾಟನೆಗೆ ಚಿಂತನೆ ನಡೆಸಲಾಗಿದೆ, ಪ್ರಸ್ತುತ ಎಲ್ಲಾ ಒಕ್ಕೂಟಗಳು ಲಾಭದಲ್ಲಿ ಕೆಲಸ ಮಾಡುತ್ತಿವೆ, ಹಾಲು ಉತ್ಪಾದನೆ ಮಾಡುವ ರೈತರಿಗೆ ಲಾಭ ಮಾಡುವ ಉದ್ದೇಶ ನಮ್ಮದಾಗಿದೆ ಎಂದರು.

ಕ್ಷೀರ ಭಾಗ್ಯ ಲಾಂಚ್ ಆಗಿ 10 ವರ್ಷ ಆದ ಹಿನ್ನಲೆಯಲ್ಲಿ ದಶಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ, ನಮ್ಮ ರಾಜ್ಯದಲ್ಲಿ ಪ್ರತಿ ಲೀಟರ್ ಗೆ ಸಾಮಾನ್ಯ ಹಾಲು 39 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ, ಇದು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಅತೀ ಕಡಿಮೆ ದರವಾಗಿದೆ ಎಂದು ಸಚಿವರು ತಿಳಿಸಿದರು.
ಐದು ರೂಪಾಯಿಯ ಬೇಡಿಕೆ ಇಟ್ಟಿದ್ದೆವು
ಪ್ರತಿ ಲೀಟರ್ 5 ರೂಪಾಯಿ ಏರಿಕೆಯ ಬೇಡಿಕೆ ಇಡಲಾಗಿತ್ತು ಎಂದು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ. ಆದರೆ ಮುಖ್ಯಮಂತ್ರಿ ಅವರು ಐದು ರೂಪಾಯಿ ಬದಲಾಗಿ 3 ರೂ ಏರಿಕೆಗೆ ಒಪ್ಪಿದ್ದಾರೆ, ಈ ಮೂರು ರೂಪಾಯಿ ರೈತರಿಗೆ ಹೋಗಬೇಕು ಎಂದು ರೇವಣ್ಣ ತಿಳಿಸಿದರು.

More News