OUTRAGE AGAINST OPPENHEIMER HOLLYWOOD FILM: ಮಹಿಳೆಯ ದೈಹಿಕ ಸಂಪರ್ಕದ ವೇಳೆ ಭಗವದ್ಗೀತೆ: ಭರ್ಜರಿ ಪ್ರದರ್ಶನ ಕಾಡುತ್ತಿರುವ ಓಪೆನ್ ಹೈಮರ್ ಹಾಲಿವುಡ್ ಚಿತ್ರದ ವಿರುದ್ಧ ಆಕ್ರೋಶ

ಮಂಬೈ: ಖ್ಯಾತ ಹಾಲಿವುಡ್ ನಿರ್ದೇಶ ಕ್ರಿಸ್ಟೋಫರ್ ನೋಲನ್ ಅವರ ಓಪೆನ್ ಹೈಮರ್ ಚಿತ್ರ ದೇಶದಾದ್ಯಂತ ಈಗಾಗಲೇ ಬಿಡುಗಡೆ ಕಂಡಿದೆ, ಭರ್ಜರಿ ಪ್ರದರ್ಶನಗೊಳ್ಳುತ್ತಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಡುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ 14 ಕೋಟಿಗೂ ಅಧಿಕ ಕಲೆಕ್ಷನ್ ಕಂಡಿದೆ.
ಈ ಚಿತ್ರಕ್ಕೆ ಇದೀಗ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಮಹಳೆಯೊಬ್ಬಳು ದೈಹಿಕ ಸಂಪರ್ಕದ ವೇಳೆ ಭಗವದ್ಗೀತೆ ಓದುವ ದೃಶ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್ ನ ಮಾಹಿತಿ ಅಧಿಕಾರಿ ಉದಯ್ ಮುಹೂರ್ಕರ್ ತಮ್ಮ ಟ್ವೀಟರ್ ಖಾತೆಯಲ್ಲಿ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಹಾಗೂ ಚಿತ್ರತಂಡ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ ಸರ್ಟೀಫೀಕೇಶನ್ ವಿರುದ್ಧ ಕಿಡಿಕಾರಿದ್ದಾರೆ.

ಈ ಚಿತ್ರದಲ್ಲಿ ಹಿಂದೂ ಧರ್ಮಕ್ಕೆ ಹಾನಿಯಾಗುವ ದೃಶ್ಯಗಳಿವೆ.. ಇದನ್ನು ಕಟ್ ಮಾಡದೇ ಹಾಗೆಯೇ ಹಾಕಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ ಸರ್ಟೀಫೀಕೇಶನ್ ಹೇಗೆ ಅನುಮೋದನೆ ನೀಡಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಕುರಿತು ಕೇಂದ್ರ ವಾರ್ತಾ ಮತ್ತು ಮಾಹಿತಿ ಪ್ರಸಾರ ಸಚಿವಾಲಯವು ತುರ್ತು ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

More News