ಬೆಂಗಳೂರು: ಶ್ರೀಕಿ ರೀತಿಯಲ್ಲಿಯೇ ದೊಡ್ಡ ದೊಡ್ಡ ಕಂಪನಿಗಳ ಸಾಫ್ಟ್ ವೇರ್ ಹ್ಯಾಕ್ ಮಾಡಿ ಮಾರಾಟ ಮಾಡ್ತಿದ್ದ ಖತರ್ನಾಕ್ ಸಾಫ್ಟ್ ವೇರ್ ಹ್ಯಾಕರ್ ಅರವನಿತ್ ಎಂಬಾತನನ್ನು ದಕ್ಷಿಣ ವಿಭಾಗ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಬಂಧಿತ ಆರೋಪಿ ಅರವನಿತ್ ತಮಿಳುನಾಡು ಮೂಲದವನಾಗಿದ್ದು, ಇಂಜಿನಿಯರಿಂಗ್ ಪದವಿದರ.
ಸ್ಟಾಕ್ ಮಾರ್ಕೆಟ್ ಗೆ ಸಂಬಂಧಿಸಿದ ಕಂಪನಿಯ ಲಕ್ಷಾಂತರ ರೂಪಾಯಿ ಸಾಫ್ಟ್ ವೇರ್ ಹ್ಯಾಕ್ ಮಾಡಿ ಸಾವಿರಾರು ರೂಪಾಯಿಗೆ ಮಾರಾಟ ಮಾಡಿದ ಸಂಬಂಧ ಸಧ್ಯ ಜೈಲು ಸೇರಿದ್ದಾನೆ.

BELL MARKET PROFILE PRO ಮತ್ತು BEL ORDER FLOW PRO ಎಂಬಾ ಸಾಫ್ಟ್ ವೇರ್ ನನ್ನು ಕದ್ದ ಕಿರಾತಕ ಕೇವಲ 6 ಸಾವಿರ ರೂಪಾಯಿಯಂತೆ 80 ಜನರಿಗೆ ಸಾಫ್ಟ್ ವೇರ್ ನ್ನ ಮಾರಾಟ ಮಾಡಿದ್ದಾನೆ. ಸಾಫ್ಟ್ ವೇರ್ ಖದ್ದಿದ್ದರಿಂದ BELL – TPO ಕಂಪನಿಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾದ ಹಿನ್ನಲೆಯಲ್ಲಿ BELL – TPO ಕಂಪನಿಯ ಮಾಲೀಕ ವಿನೋದ್ ಠಾಣೆಗೆ ದೂರು
ನೀಡಿದ್ದಾರೆ.

ದೂರಿನ ಅನ್ವಯ ಶೋಧಿಸಿದ ಪೊಲೀಸರಿಗೆ ತಿರುಚಿಯ ತನ್ನ ಮನೆಯಲ್ಲಿ ಇದ್ದುಕೊಂಡೆ ಅರವನಿತ್ ಖರ್ತನಾಕ್ ಕೆಲಸ ಮಾಡುತ್ತಿದ್ದದ್ದು ತಿಳಿದು ಬಂದಿದ್ದು, ದಕ್ಷಿಣ ವಿಭಾಗ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸ್ತಿದ್ದಾರೆ.




