TOILET VIDEO SHOOTING: ಉಡುಪಿ ಶೌಚಾಲಯ ವೀಡಿಯೋ ಚಿತ್ರೀಕರಣ: ಮೂವರು ವಿದ್ಯಾರ್ಥಿನಿಯರ ವಿರುದ್ಧ FIR ದಾಖಲು

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ವಿಚಾರಕ್ಕೆ ಸಂಬಂಧಿಸಿದಂತೆ
ಮೂವರು ವಿದ್ಯಾರ್ಥಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ವಿಚಾರ ಸಾಕಷ್ಟು ರಾಜಕೀಯ ಗದ್ದಲಕ್ಕೆ ಎಡೆಮಾಡಿ ಕೊಟ್ಟಿತ್ತು. ಸಮುದಾಯ ಘರ್ಷಣೆಗೂ ಘಟನೆ ಕಾರಣವಾದ ಹಿನ್ನಲೆ ಸುಮೊಟೋ ಕೇಸ್ ದಾಖಲಿಸಿದ ಮಲ್ಪೆ ಪೊಲೀಸರು, ಮೂವರು ವಿದ್ಯಾರ್ಥಿನಿಯರ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿ ಕೇಸ್ ದಾಖಲಿಸಿದ್ದಾರೆ.

ವಿದ್ಯಾರ್ಥಿನಿಯೋರ್ವಳು ಸ್ನಾನ ಮಾಡುವುದನ್ನು ಆಕೆಯ ಮಹಿಳಾ ಸಹಪಾಠಿಗಳೇ ಗೌಪ್ಯವಾಗಿ ಚಿತ್ರೀಕರಿಸಿದ ಘಟನೆ ವೈರಲ್ ಆಗಿ ಸಾಕಷ್ಟು ಪರ ವಿರೋಧಕ್ಕೆ ಕಾರಣವಾಯಿತು.
ಹುಡುಗಾಟ ಮಾಡಲು ಹೋಗಿ ವಿದ್ಯಾರ್ಥಿನಿಯರು ಪೇಜಿಗೆ ಸಿಲುಕಿದ್ದಾರೆ, ಆದರೂ, ನಾವು ಕ್ರಮ ಕೈಗೊಂಡಿದ್ದೇವೆ. ನಾವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದೇವೆ ಎಂದು ಕಾಲೇಜು ಮಂಡಳಿ ಹೇಳಿಕೆ ನೀಡಿದ ಬೆನ್ನಲ್ಲೇ ಮೂವರು ಅನ್ಯ ಕೋಮಿನ ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್ ದಾಖಲಾಗಿದೆ.

509,( ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿರುವ ಕೃತ್ಯ,) 204, (ಅರಿವಿಗೆ ಬಾರದಂತೆ ವಿಡಿಯೋ ಮಾಡುವ ಕೃತ್ಯ) 175 (ಉದ್ದೇಶ ಪೂರ್ವಕವಾಗಿ ಸೂಕ್ತ ದಾಖಲೆ ನೀಡದಿರುವುದು) 34, (ಸಾಮೂಹಿಕವಾಗಿ ಮಾಡಿರುವ ಕೃತ್ಯ)66(E) ರ ಅಡಿ ಕೇಸ್ ದಾಖಲಿಸಿದ್ದಾರೆ. ಅಲ್ಲದೇ, ಉಡುಪಿ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜು ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ಸ್ವಯಂಪ್ರೇರಿತ ಕೇಸ್ ದಾಖಲಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್ ಪಿ ಸುಷ್ಮಾ, ಖಾಸಗಿತನಕ್ಕೆ ಧಕ್ಕೆ ಆಗುವ ವಿಡಿಯೋ ಚಿತ್ರೀಕರಣ ಆಗಿದೆ. ವಿಷಯ ತಿಳಿದು ವೀಡಿಯೋ ಡಿಲೀಟ್ ಮಾಡಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ. ಇದೊಂದು ಗಂಭೀರವಾದ ಅಪರಾಧ ಕೃತ್ಯವಾಗಿದ್ದು, ವಿಡಿಯೋ ಮಾಡಿ ತಪ್ಪೊಪ್ಪಿಕೊಂಡಿರುವ ಬಗ್ಗೆ ಆಡಳಿತ ಮಂಡಳಿ ಹೇಳಿದೆ. ಸತ್ಯಾಸತ್ಯತೆ ಪತ್ತೆ ಹಚ್ಚುವ ಉದ್ದೇಶದಿಂದ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು‌.

More News