DHARAMSTHALA SOUJANYA CASE: ಧರ್ಮಸ್ಥಳ ಸೌಜನ್ಯ ಪೋಷಕರಿಂದ ಸಿಎಂ ಭೇಟಿ: ಪ್ರಕರಣದ ಮರುತನಿಖೆಗೆ ಮನವಿ

ಬೆಂಗಳೂರು : ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆಗಾಗಿ ಸೌಜನ್ಯಳ ಪೋಷಕರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಸೌಜನ್ಯಳ ಕುಟುಂಬ ಸದಸ್ಯರು ಮತ್ತು ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ಪ್ರಕರಣವನ್ನು ಯಾತಕ್ಕಾಗಿ ಮರು ತನಿಖೆಗೆ ಒಪ್ಪಿಸಬೇಕು ಎನ್ನುವುದನ್ನು ವಿವರಿಸಿದರು.

ಅಮಾಯಕ ಸೌಜನ್ಯಳ ಸಾವಿಗೆ ನ್ಯಾಯ ಕೊಡಿಸಲು ಸೌಜನ್ಯ ಕುಟುಂಬದವರೊಂದಿಗೆ ಇದ್ದ ಮಹೇಶ್ ಶೆಟ್ಟಿ ತಿಮರೋಡಿ ಒತ್ತಾಯಿಸಿದರು.
ಕಳೆದ 2012ರ ಅಕ್ಟೋಬರ್ 9 ರಂದು ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಕುರಿತು ಹಲವು ಇಲಾಖೆಗಳ ತನಿಖೆಯೂ ನಡೆದಿತ್ತು. 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು.

2013ರಿಂದ 2023ರವರೆಗೆ ಸಿಬಿಐ ತನಿಖೆ ನಡೆಸಿತ್ತು. ಇತ್ತೀಚೆಗೆ ಶಂಕಿತ ಆರೋಪಿ ಸಂತೋಷ್ ರಾವ್ ಅವರನ್ನು ನ್ಯಾಯಾಲಯ ದೋಷ ಮುಕ್ತಗೊಳಿಸಿತ್ತು.

More News