ಬೆಂಗಳೂರು: ನೈಸ್ ಪ್ರಕರಣ ಸಂಬಂಧ ಪಟ್ಟಂತೆ ಕಳೆದ 15 ದಿನದಿಂದ ನನಗೆ ಜೀವ ಬೆದರಿಕೆ ಕರೆ ಬರುತ್ತಿದೆ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಸ್ಪಷ್ಟನೆ ನೀಡಿದ್ದಾರೆ.
ಜೀವ ಬೆದರಿಕೆ ಕರೆ ವಿಚಾರದ ಕುರಿತು ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕಳೆದ ೧೫ ದಿನಗಳಿಂದ ನನಗೆ ಕಾಲ್ ಬರ್ತಿದೆ. ರೈತರು ನಮಗೆ ಕಾಲ್ ಮಾಡಿ ಬನ್ನಿ ಅಂದ್ರು. ನಾನು ಅಲ್ಲಿಗೆ ಬರ್ತೇನೆ ಅಂತ ಹೇಳಿದ್ದೆ. ಅದರಂತೆ ನಾನು ಅಲ್ಲಿಗೆ ಹೋಗಿದ್ದೆ. ನಾನು ರೈತರಿಗೆ ಭರವಸೆ ಕೊಟ್ಟು ಬಂದಿದ್ದೆ. ಆ ನಂತರ ನಿನಗೂ ಇದಕ್ಕೆ ಏನು ಸಂಬಂಧ..? ನಿನ್ನದು ಈ ಕ್ಷೇತ್ರವೇ ಹೇಗೆ ಅಂತ ಮಾತನಾಡ್ತಿದ್ದಾರೆ. ನೈಸ್ ಪ್ರಾಜೆಕ್ಟ್. ಡಿವಿಯೇಶನ್ ಆಗಿರೋ ಪ್ರಾಜೆಕ್ಟ್. ಸರ್ಕಾರದ ನಿಯಮಗಳನ್ನ ಉಲ್ಲಂಘನೆ ಮಾಡಿ ಕಂಪನಿ ಹಣ ಲಪಟಾಯಿಸುತ್ತಿದೆ ಎಂಬ ಆರೋಪವಿದೆ ನಾನೇ ಇದರ ಬಗ್ಗೆ ರಿಪೋರ್ಟ್ ಕೊಟ್ಟಿದ್ದೆ ಎಂದು ದೂರಿದ್ದಾರೆ.

ಸರ್ಕಾರಕ್ಕೆ ನಾನು ವರದಿ ಕೊಟ್ಟಿದ್ದೆ. ಸರ್ಕಾರದ ಅದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ನಾನು ೪೫ ವರ್ಷಗಳಿಂದ ರಾಜಕಾರಣದಲ್ಲಿರುವವನು. ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದೇನೆ. ಇಲ್ಲಿಯವರೆಗೆ ನಾನು ಗನ್ ಮ್ಯಾನ್ ಪಡೆದಿರಲಿಲ್ಲ. ಇನ್ಮುಂದೆ ನಾನು ಗನ್ ಮ್ಯಾನ್ ತೆಗೆದುಕೊಳ್ತೇನೆ ಎಂದು ಹೇಳಿದ್ದಾರೆ.

ಇದು ಬಹಳ ಹಿಂದಿನ ಪ್ರಕರಣ. ದೇವೇಗೌಡರು ಸಿಎಂ ಆಗಿದ್ದರು. ನಾನು ಡೆಪ್ಯೂಟಿ ಸ್ಪೀಕರ್ ಆಗಿದ್ದೆ. ಆಗ ನೈಸ್ ಯೋಜನೆ ಪ್ರಾರಂಭವಾಗಿದ್ದು.ರಸ್ತೆ ಅಗಲೀಕರಣಕ್ಕೆ ೭೦೦ ಕೋಟಿ ಖರ್ಚು ಮಾಡಲಾಗಿತ್ತು. ಈ ಯೋಜನೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಈ ಯೋಜನೆ ಬಗ್ಗೆ ಸರ್ಕಾರ ವಿಳಂಬ ಮಾಡಬಾರದು. ವಿಳಂಬ ಮಾಡಿದಷ್ಟೂ ಆ ಕಂಪನಿಗೆ ಲಾಭವಾಗುತ್ತೆ. ಅಗ್ರಿಮೆಂಟ್ನಂತೆ ಇಲ್ಲಿ ಯೋಜನೆ ನಡೆದಿಲ್ಲ. ಇದರಲ್ಲಿ ವೈಯಲೇಶನ್ ಆಗಿದೆ. ಅವರು ನಮ್ಮ ಪಕ್ಷಕ್ಕೆ ಬಂದು ಸೇರಿರಬಹುದು. ಆದರೆ ನಾನು ಅವರ ಜೊತೆ ಮಾತನಾಡಿಲ್ಲ. ಎಂದೂ ಅವರ ಜೊತೆ ಸೇರಿರಲಿಲ್ಲ
ಇದರಲ್ಲಿ ಕಾನೂನು ತೊಡಕು ಏನೂಬರಲ್ಲ. ಮೂವರ ಕಮಿಟಿ ಮಾಡಿ ಎಂದು ಸಲಹೆ ಕೊಟ್ಟಿದ್ದೇವೆ. ಆರೇಳು ವರ್ಷಗಳಿಂದ ಎಷ್ಟು ಕೇಸ್ ಆಗಿದೆ ಅದನ್ನ ನೋಡಿ ಮುಂದುವರಿಯಬೇಕೆಂದು ವರದಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಈ ಹಿಂದೆಯೂ ಇಬ್ಬರು ಮಂತ್ರಿಗಳು ವೈಯಲೇಶನ್ ಎಂದಿದ್ದರು. ಅದಕ್ಕೆ ಬಂಡವಾಳ ಎಷ್ಟು..? ಈತ ಹಾಕಿರುವ ಬಂಡವಾಳ ಎಷ್ಟು ..? ಅದರಿಂದ ಬಂಡವಾಳ ಬಂದಿರುವುದು ಎಷ್ಟು..? ಎಲ್ಲವೂ ಈಗ ಪರಿಶೀಲಿಸಬೇಕು
ಎಂದು ಟಿ.ಬಿ.ಜಯಚಂದ್ರ ಒತ್ತಾಯಿಸಿದ್ದಾರೆ.




