ಬೆಂಗಳೂರು : ನಾಳೆಯಿಂದ ಹಾಲಿನ ದರ ಅಧಿಕೃತವಾಗಿ ಏರಿಕೆಯಾಗಲಿದೆ ಎಂದು ಕೆಎಂಎಫ್ ಎಂಡಿ ಜಗದೀಶ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಅನುಮತಿ ಪಡೆದು ದರ ಹೆಚ್ಚಳ ಮಾಡಲಾಗುತ್ತಿದೆ, ಒಂದು ಲೀಟರ್ ಹಾಲಿಗೆ 3 ರೂ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಚಿಲ್ಲರೆ ಸಮಸ್ಯೆ ತಲೆದೋರಬಾರದು ಎಂಬ ಉದ್ದೇಶದಿಂದ ಅರ್ಧ ಲೀಟರ್ ಹಾಲಿನಲ್ಲಿ 10 ಎಂ ಎಲ್ ಎಕ್ಸಟ್ರಾ ಹಾಲು ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಚಿಲ್ಲರೆ ಸಮಸ್ಯೆ ಬಗೆಹರಿಸೋ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು,. ಇನ್ಮುಂದೆ ಅರ್ಧ ಲೀಟರ್ ಹಾಲು 510 ಲೀಟರ್ ಇರಲಿದೆ, ಅರ್ಧ ಲೀಟರ್ ಹಾಲಿಗೆ ದರ ಏರಿಕೆ ಪ್ರಕಾರ 21.5 ರೂ ಆಗಲಿದೆ, ಈ 50 ಪೈಸೆ ಚಿಲ್ಲರೆ ಸಮಸ್ಯೆ ಸರಿದೂಗಿಸಲು 10 ಎಂಎಲ್ ಹಾಲು ಹೆಚ್ಚಳ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ನಾಳೆಯಿಂದ ಬ್ಲೂ ಪ್ಯಾಕೇಟ್ ಹಾಲು : ಈ ಹಿಂದೆ ಇದ್ದ 39 ರೂಪಾಯಿ ಬದಲಾಗಿ 42 ರೂಪಾಯಿ
ಬ್ಲೂ ಪ್ಯಾಕೇಟ್ : (ಟೋನ್ಡ್) 40 ರೂಪಾಯಿ ಯಿಂದ 43 ರೂಪಾಯಿಗೆ ಏರಿಕೆ
ಗ್ರೀನ್ ಪ್ಯಾಕೇಟ್ : 44 ರೂಪಾಯಿಯಿಂದ 47ರೂಪಾಯಿಗೆ ಏರಿಕೆ
ಆರೆಂಜ್ ಪ್ಯಾಕೇಟ್ : 45 ರೂಪಾಯಿಯಿಂದ 48ಗೆ ಏರಿಕೆ
ಮೊಸರು (ಕೆಜಿ) : 47 ರೂಪಾಯಿ ಯಿಂದ 50 ರೂಪಾಯಿ
ಮೊಸರು (ಅರ್ಧ ಕೆಜಿ) : 24 ರೂಪಾಯಿಯಿಂದ 26 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.




