‘Superstar’ Tag Always Been a Problem: ಸೂಪರ್ ಸ್ಟಾರ್ ಪಟ್ಟವೇ ದೊಡ್ಡ ತಲೆನೋವು: ನಟ ರಜನೀಕಾಂತ್

ಸೂಪರ್ ಸ್ಟಾರ್.. ತಮಿಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡ್ತಿರುವ ಪದ. ಆಯಾ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿ ಮೆರೆದ ನಾಯಕರಿಗೆ ಜನ ಪ್ರೀತಿಯಿಂದ ಕೊಡುತ್ತಾ ಬಂದ ಪಟ್ಟ ಇತ್ತೀಚೆಗೆ ವಿವಾದದ ಕಿಡಿ ಹಚ್ಚಿತ್ತು. ನಟ ವಿಜಯ್ ಗೆ ಸೂಪರ್ ಸ್ಟಾರ್ ಪಟ್ಟ ನೀಡಬೇಕೆಂಬ ಕೂಗು ಎದ್ದಿತ್ತು. ಇದೇ ಮೊದಲ ಬಾರಿಗೆ ಟೈಟಲ್ ಬಗ್ಗೆ ಮಾತನಾಡಿರುವ ನಟ ರಜನೀಕಾಂತ್ ಪರೋಕ್ಷವಾಗಿ ವಿಜಯ್ ಗೆ ಕುಟುಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ‌ ಸದ್ದು ಮಾಡ್ತಿದೆ.

ಜೈಲರ್’ ಚಿತ್ರದ ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಟ ರಜನೀಕಾಂತ್, ಜೈಲರ್ ಚಿತ್ರದ ‘ಹುಕುಂ’ ಹಾಡಿನಲ್ಲಿ ಸೂಪರ್ ಸ್ಟಾರ್ ಪದ ಬಳಿಸಿದ್ದಾರೆ. ಆ ಪದ ಬೇಡ ಎಂದು ನಾನು ಹೇಳಿದೆ. ಕೇಳಲಿಲ್ಲ. ನನಗೆ ಸೂಪರ್ ಸ್ಟಾರ್ ಪಟ್ಟವೇ ದೊಡ್ಡ ತಲೆನೋವಾಗಿದೆ ಎಂದು ಮಾತನಾಡಿದ್ದಾರೆ.

ಇನ್ನು ಸೂಪರ್ ಸ್ಟಾರ್ ಪಟ್ಟದ ಇತಿಹಾಸ ಕೆದಕಿದ ಅವರು, 1977ರಲ್ಲಿ ಸೂಪರ್ ಸ್ಟಾರ್ ಪಟ್ಟದ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿತ್ತು. ಆಗ ಕಮಲ್ ಹಾಸನ್, ಶಿವಾಜಿ ಗಣೇಶನ್ ಸ್ಟಾರ್ ನಟರಾಗಿ ಮೆರೆಯುತ್ತಿದ್ದರು. ಅಂತಹ ಸಮಯದಲ್ಲಿ ಸೂಪರ್ ಸ್ಟಾರ್ ಬಿರುದು ನನಗೆ ಕೊಟ್ಟಿದ್ದು ಬಹಳ ಚರ್ಚೆ ಹುಟ್ಟಾಕಿತ್ತು. ಅದು ಇಂದಿಗೂ ಚರ್ಚೆಯಲ್ಲೇ ಇದೆ ಎಂದರು.

ಮುಂದುವರೆದು, ಸೂಪರ್ ಸ್ಟಾರ್ ಟೈಟಲ್ ಬಗ್ಗೆಯೇ ಮಾತನಾಡುತ್ತ ಚಿಕ್ಕದೊಂದು ಕಥೆ ಹೇಳುವ ಮೂಲಕ ವಿಜಯ್ ಗೆ ನಟ ರಜನೀಕಾಂತ್ ಟಾಂಗ್ ನೀಡಿದ್ದಾರೆ. ಒಂದು ಕಾಡಲ್ಲಿ ಹದ್ದು ಮತ್ತು ಕಾಗೆ ಇರುತ್ತೆ. ಕಾಗೆ ಯಾವಾಗಲೂ ಹದ್ದಿಗಿಂತ ಎತ್ತರದಲ್ಲಿ ಹಾರಲು ಪ್ರಯತ್ನಿಸುತ್ತದೆ. ಆದರೆ ಯಾವತ್ತಿಗೂ ಅದು ಸಾಧ್ಯವಿಲ್ಲ. ಎಂದು ನಟ ರಜನೀಕಾಂತ್ ದಳಪತಿ ವಿಜಯ್‌ ಉದ್ದೇಶಿಸಿ ಮಾತನಾಡಿದ್ದು, ವಿಜಯ್ ಅಭಿಮಾನಿಗಳು ಗರಂ ಆಗಿದ್ದಾರೆ.

More News