ಕಳೆದ ವರ್ಷದವರೆಗೆ ತೆಲುಗು ಚಿತ್ರರಂಗ ಅಂದ್ರೆ, ರಶ್ಮಿಕಾ ಮಂದಣ್ಣ, ತಮನ್ನಾ, ಪೂಜಾ ಹೆಗ್ಡೆ ಅಂತಿದ್ದ ತೆಲುಗು ಚಿತ್ರರಂಗದ ನಿರ್ದೇಶಕರು ಇದೀಗ ಶ್ರೀ ಲೀಲಾ.. ಶ್ರೀ ಲೀಲಾ ಅಂತಿದ್ದಾರೆ. ಅದಕ್ಕೆ ಕಾರಣ ಆಕೆಗೆ ಇರುವ ಗ್ರಹಬಲ ಎಂದು ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಸಮಂತಾ, ವಿಜಯ್ ದೇವರಕೊಂಡ, ರಶ್ಮಿಕಾ ಸೇರಿದಂತೆ ಅನೇಕ ನಟ, ನಟಿಯರ ಬಗ್ಗೆ ಮಾತನಾಡಿ ಸುದ್ದಿಯಲ್ಲಿ ಇರುತ್ತಿದ್ದ ವೇಣುಸ್ವಾಮಿ ಮೊದಲ ಬಾರಿಗೆ ಶ್ರೀಲೀಲಾ ಬಗ್ಗೆ ಯೂ ಭವಿಷ್ಯ ನುಡಿದಿದ್ದಾರೆ. ಶ್ರೀಲೀಲಾರದ್ದು ಮೀನ ರಾಶಿ. ಆಕೆಯ ಜಾತಕದಲ್ಲಿ ರಾಜಯೋಗ ಇದೆ. ಆದರೆ ಆ ರಾಜಯೋಗ ಬಹುಕಾಲ ಇರುತ್ತದೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಪವನ್ ಕಲ್ಯಾಣ್, ಬಾಲಯ್ಯ ಚಿತ್ರದಲ್ಲಿ ನಟಿಸುತ್ತಿರುವ ಶ್ರೀಲೀಲಾ ಮಹೇಶ್ ಬಾಬು ಚಿತ್ರದ ಗುಂಟೂರು ಚಿತ್ರದ ಹಿರೋಹಿನ್ ಕೂಡ. ಅಷ್ಟೇ ಅಲ್ಲದೇ, ಅಲ್ಲು ಅರ್ಜುನ್ ರ ಪುಷ್ಪ2 ಚಿತ್ರದ ಐಟಂ ಸಾಂಗ್ ನಲ್ಲಿ ಬರಲಿದ್ದಾರೆ ಎನ್ನಲಾಗಿದೆ. ನಟಿಯ ಈ ಬೆಳವಣಿಗೆ ಕಂಡು ಭವಿಷ್ಯ ನುಡಿದ ವೇಣುಸ್ವಾಮಿ, ಆಕೆಯ ಗ್ರಹಬಲ ನೋಡಿದರೆ 2028ರ ವರೆಗೆ ಶ್ರೀಲೀಲಾಗೆ ಸೋಲೇ ಇಲ್ಲ ಎಂದು ನುಡಿದಿದ್ದಾರೆ.
ಶ್ರೀಲೀಲಾ ಮತ್ತು ನಯನತಾರಾ ಜಾತಕಗಳು ಬಹುತೇಕ ಒಂದೇ ರೀತಿ ಇವೆ. ಸೌತ್ ಸಿನಿ ಇಂಡಸ್ಟ್ರಿ ಯಲ್ಲಿ ನಯನತಾರಾ ಟಾಪ್ ಹೀರೋಯಿನ್ ಆಗಿ ಮುಂದುವರೆದಿದ್ದಾರೆ. ಆ ಮಟ್ಟಕ್ಕೆ ಶ್ರೀಲೀಲಾ ಹವಾ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಒಟ್ಟಾರೆಯಾಗಿ ಇನ್ನು 5 ವರ್ಷ ಕಾಲ ಶ್ರೀಲೀಲಾ ದರ್ಬಾರ್ ಜೋರಾಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.




