Kangana Ranaut Reviews Oppenheimer: ಸೆಕ್ಸ್ ವೇಳೆ ಭಗವದ್ಗೀತೆ ಓದು: ಆಪರ್ ಹೈಮರ್ ಸಿನಿಮಾದ ಆ ದೃಶ್ಯ ನಂಗಿಷ್ಟ ಎಂದ ನಟಿ ಕಂಗನಾ

ಅಣುಬಾಂಬ್ ಕಂಡು ಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್‌ಹೈಮರ್ ಅವರ ಜೀವನಾಧಾರಿತ ಕಥೆ
“ಆಪನ್‌ಹೈಮರ್” ಸಧ್ಯ ಭಾರೀ ಚರ್ಚೆಗೆ ಗುರಿಯಾಗಿದೆ.
ಆಪನ್‌ಹೈಮರ್ ಪಾತ್ರಕ್ಕೆ ಕಿಲಿಯನ್ ಮರ್ಫಿ ಬಣ್ಣ ಹಚ್ಚಿದ್ದು, ವಿಜ್ಞಾನಿಯ ಕಥೆಯನ್ನ ತೆರೆ ಮೇಲೆ ಬಿಚ್ಚಿಡುವಲ್ಲಿ ಯಶ ಕಂಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಆಪನ್‌ಹೈಮರ್ ಅವರಿಗೆ ಹಿಂದೂ ಪುರಾಣಗಳ ಬಗ್ಗೆ ಆಸಕ್ತಿ ಇತ್ತು. ಸಂಸ್ಕೃತ ಕಲಿತಿದ್ದರು ಮತ್ತು ಭಗವದ್ಗೀತೆ ಓದಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದಲ್ಲಿನ ಒಂದು ದೃಶ್ಯ ಕಾಂಟ್ರವರ್ಸಿ ಸೃಷ್ಟಿಸಿದೆ.

ಆಪನ್‌ಹೈಮರ್ ಜೊತೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಆತನ ಪ್ರೇಯಸಿಗೆ ಅನೇಕ ಪುಸ್ತಕಗಳು ಕಾಣಿಸುತ್ತವೆ. ಆ ಪೈಕಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ಇದು ಏನು ಎಂದು ಆಕೆ ಪ್ರಶ್ನಿಸುತ್ತಾಳೆ. ಇದು ಭಗವದ್ಗೀತೆ ಎಂದು ಹೇಳುವ ಆಪನ್‌ಹೈಮರ್, ಅದರಲ್ಲಿನ ಸಾಲನ್ನೂ ಓದ್ತಾನೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದ್ದಂತೆ ಸಾಕಷ್ಟು ಆಕ್ರೋಶ ವ್ಯಕ್ತವಾಯ್ತು. ಈ ದೃಶ್ಯಕ್ಕೆ ಭಾರತದಲ್ಲಿ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದರು. ಇದು ಹಿಂದೂ ಧರ್ಮದ ಮೇಲೆ ಮಾಡಲಾಗಿರುವ ದಾಳಿ ಎಂದು ಕೆಲವರು ಅಸಮಾಧಾನ ಹೊರ ಹಾಕಿದ್ದರೆ, ಮತ್ತೊಂದೆಡೆ ಆಪರ್ ಹೈಮರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರೆಕಿದೆ.

ಸೆಕ್ಸ್ ಮಾಡುವ ವೇಳೆ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯ ಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿರುವ ಬೆನ್ನಲ್ಲೇ ನಟಿ ಕಂಗನಾ ರಣಾವತ್ ತಮ್ಮ ಮೌನ ಮುರಿದಿದ್ದಾರೆ. ಅಲ್ಲದೇ ಈ ದೃಶ್ಯ ನನಗೆ ಸಖತ್ ಇಷ್ಟವಾಯಿತು ಎಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ.

ಚಿತ್ರ ಕುರಿತು ತಮ್ಮ ಖಾತೆಯಲ್ಲಿ ಬರೆದುಕೊಂಡಿರುವ ನಟಿ ಕಂಗನಾ, ಆಪನ್ ಹೈಮರ್ ಒಂದೊಳ್ಳೆ ಸಿನಿಮಾ. ಎಲ್ಲರೂ ನೋಡಬೇಕು. ಯಾವ ದೃಶ್ಯವನ್ನು ವಿವಾದ ಎಂದು ಪರಿಗಣಿಸಲಾಗಿತ್ತೋ, ಅದು ನನ್ನಿಷ್ಟದ ದೃಶ್ಯ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹೀರೋ ಸೆಕ್ಸ್ ಮಾಡುವಾಗ ಭಗವದ್ಗೀತೆ ಹೇಳುವ ಸಂಭಾಷಣೆ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ಅವರು ಸಹ ಗರಂ ಆಗಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ , ಅಮೆರಿಕದ ನ್ಯೂಕ್ಲಿಯರ್ ವಿಜ್ಞಾನಿ ಆಪನ್‌ಹೈಮರ್ ಅವರು ಭಗವದ್ಗೀತೆ ಓದಿದ್ದರು. ವಿಪರ್ಯಾಸ ಏನೆಂದರೆ, ಭಾರತದ ಶೇಕಡ 0.0000001ರಷ್ಟು ಮಂದಿ ಭಗವದ್ಗೀತೆ ಓದಿರ್ತಾರೆ ಎಂಬ ಬಗ್ಗೆ ನನಗೆ ಅನುಮಾನ ಇದೆ ಎಂದು ಟ್ವೀಟ್ ಮಾಡಿ ಕುಟುಕಿದ್ದರು. ಆರ್‌ಜಿವಿ ಮಾತಿಗೆ ಪರ-ವಿರೋಧದ ಟೀಕೆಗಳು ಎದುರಾಗಿದ್ದವು.

More News