GOVERNMENT YIELD TO PRESSURE: ಒತ್ತಡಕ್ಕೆ ಮಣಿದ ಸರ್ಕಾರ: ಬೆಳ್ಳಂಬೆಳ್ಳಗೆ 11 ಪೊಲೀಸ್ ಇನ್ಸ್‌ಪೆಕ್ಟರ್​ಗಳ ವರ್ಗಾವಣೆಗೆ ತಡೆ

ಬೆಂಗಳೂರು : ರಾಜ್ಯ ಸರ್ಕಾರ ನಿನ್ನೆ ರಾಜ್ಯದ 211 ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇಂದು ಬೆಳ್ಳಂ ಬೆಳ್ಳಗೆ 11 ಪೊಲೀಸ್ ಇನ್ಸ್‌ಪೆಕ್ಟರ್ ಗಳಿಗೆ ತಡೆ ಭಾಗ್ಯ ಸಿಕ್ಕಿದ್ದು, ಅವರು ಅಲ್ಲಿಯೇ ಮುಂದುವರೆಯಲಿದ್ದಾರೆ.
ಇದಕ್ಕೆ ಸ್ಥಳೀಯ ಶಾಸಕರ, ಸಚಿವರ ಅಥವಾ ಇನ್ನಾವುದೇ ಒತ್ತಡಕ್ಕೆ ಮಣಿದು ವರ್ಗಾವಣೆಯನ್ನು ತಡೆಹಿಡಿದಿದೆ. ಇವರು 11 ಪೊಲೀಸ್ ಇನ್ಸ್ ಪೆಕ್ಟರ್ ಅವರು ಅಲ್ಲಿಯೇ ಮುಂದುವರೆಯಲಿದ್ದಾರೆ.

ರವಿ ಗೌಡ ಬಿ- ಯಶವಂತಪುರ ಟ್ರಾಫಿಕ್ ಸಂಚಾರ, ಲಕ್ಷ್ಮಣ್ ಜೆ – ನಂದಿನಿ ಲೇಔಟ್ ಪೊಲೀಸ್, ಅಶತ್ಥಗೌಡ- ಜಾನ್ಞಭಾರತಿ ಪೊಲೀಸ್ ಠಾಣೆ, ಗೋವಿಂದರಾಜು – ಪೀಣ್ಯ ಪೊಲೀಸ್ ಠಾಣೆ.
ಕೃಷ್ಣಕುಮಾರ್- ಬೇಗೂರು ಪೊಲೀಸ್ ಠಾಣೆ, ಜಗದೀಶ್ – ಕುಮಾರ್ ಸ್ವಾಮಿ ಲೇಔಟ್ ಪೊಲೀಸ್ ಠಾಣೆ, ವ್ರಜಮುನಿ- ಕೆ ಆರ್ ಮಾರ್ಕೆಟ್ ಪೊಲೀಸ್ ಠಾಣೆ , ರವಿಕುಮಾರ್- ಪುಟ್ಟೆನಹಳ್ಳಿ ಪೊಲೀಸ್ ಠಾಣೆ.
ಅನಿಲ್ ಕುಮಾರ್ – ಮಲ್ಲೇಶ್ವರ ಪೊಲೀಸ್ ಠಾಣೆ, ಎಡ್ವಿನ್ ಪ್ರದೀಪ್ – ಜಿಗಣಿ ಪೊಲೀಸ್ ಠಾಣೆ, ಧನಂಜಯ್ – ಯಶವಂತಪುರ ಪೊಲೀಸ್ ಠಾಣೆ ಒಟ್ಟು ಬೆಂಗಳೂರು ಸೇರಿದಂತೆ 11 ಪೊಲೀಸ್ ಇನ್ಸ್‌ಪೆಕ್ಟರ್ ಗಳಿಗೆ ತಡೆ ಭಾಗ್ಯ ದೊರಕಿದೆ.

More News