ಚಾಮರಾಜನಗರ : ಶಾಲಾ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೆ ಸೆರೆಯಾಗಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಕುಂತೂರು ಬೆಟ್ಟದ ಬಳಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊನೆಗೂ ಅಂದಾಜು ಆರು ವರ್ಷದ ಖತರನಾಕ್ ಚಿರತೆ ಸೆರೆ ಸಿಕ್ಕಿದೆ. ಚಿರತೆ ಶಾಲಾ ಬಾಲಕನ ಮೇಲೆ ದಾಳಿ ಮಾಡಿದ ನಂತರ ಇನ್ನಿತರ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂದೇಟು ಹಾಕಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಲೆ ಮುಂದಿನ ದಾರಿಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಬಂದೋಬಸ್ತ್ ಅನ್ನು ಅರಣ್ಯ ಇಲಾಖೆ ಮಾಡಿತ್ತು.

ಚಿರತೆ ದಾಳಿಯಿಂದ ಸ್ಥಳೀಯ ಗ್ರಾಮಸ್ಥರು ಕೂಡ ಭಯಭೀತರಾಗಿದ್ದರು. ಸದ್ಯ ಇದೀಗ ಚಿರತೆ ಸೆರೆಸಿಕ್ಕಿದ ನಂತರ ಮಲ್ಲಿಗೆಹಳ್ಳಿ ಜನರು ನಿಟ್ಟಿಸಿರು ಬಿಡುವಂತಾಗಿದೆ. ಕಳೆದ ಹಲವಾರು ದಿನಗಳ ಅರಣ್ಯ ಇಲಾಖೆಯ ಅಧಿಕಾರಿಗಳ ಸತತ ಕಾರ್ಯಾಚರಣೆ ಯಶಸ್ವಿಗೊಂಡಿದೆ.




