ಬೆಂಗಳೂರು: ಆರೋಗ್ಯ ಸೌಧದಲ್ಲಿ ಇಂದು ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು, ಡಯಲಾಸಿಸ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಮಸ್ಯೆಗಳನ್ನ ಅಲೀಸಿದರು.

ಬಿ.ಆರ್.ಎಸ್ ನವರು ನೀಡಬೇಕಾಗಿದ್ದ, ಬಾಕಿ ವೇತನವನ್ನ 45 ದಿನಗಳ ಒಳಗಾಗಿ ಪಾವತಿಸುವುದಾಗಿ ಸಚಿವರು ಸಿಬ್ಬಂದಿಗಳಿಗೆ ಭರವಸೆ ನೀಡಿದರು. ಇಎಸ್.ಐ, ಪಿಎಫ್ ಕುರಿತಂತೆ ಅಗಸ್ಟ್ 31 ರೊಳಗೆ ಕ್ರಮ ಕೈಗೊಳ್ಳುವಂತೆ ಸಂಜೀವಿನಿ ಸಂಸ್ಥೆಯವರಿಗೆ ಅವರಿಗೆ ಇದೇ ವೇಳೆ ತಾಕೀತು ಮಾಡಲಾಯಿತು.

ಆರೋಗ್ಯ ಸಚಿವರ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟು, ಡಯಾಲಿಸಿಸ್ ಕೇಂದ್ರಗಳಲ್ಲಿ ತಮ್ಮ ಕಾರ್ಯ ಮುಂದುವರಿಸಲು ಸಿಬ್ಬಂದಿಗಳು ನಿರ್ಧರಿಸಿದ್ದಾರೆ.
ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್, ಎಂ.ಡಿ ಎನ್.ಎಚ್.ಎಮ್ ನವೀನ್ ಭಟ್ ಪಾಲ್ಗೊಂಡಿದ್ದರು.




