ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ, ಆದಾಯ ಮೀರಿದ ಆಸ್ತಿ ಗಳಿಕೆ, ಲಂಚದ ಬೇಡಿಕೆ ಪ್ರಕರಣದ ದೂರಿನ ಆಧಾರದ ಮೇಲೆ ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಬೃಹತ್ ಬೇಟೆ ನಡೆದಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಆರ್ ಒ , ಎ ಆರ್ ಒ , ಎಡಿಟಿಪಿ ಕಚೇರಿಗಳ ಮೇಲೆ ಸಂಜೆ ನಾಲ್ಕು ಗಂಟೆಗೆ ಲೋಕಾ ಅಧಿಕಾರಿಗಳು ಮೆಗಾ ದಾಳಿ ನಡೆಸಿದ್ದಾರೆ.

೪೫ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ
ಬಿಬಿಎಂಪಿಯ ಒಟ್ಟು 45 ಕಚೇರಿಗಳು ದಿಢೀರ್ ತಪಾಸಣೆಗೆ ಒಳಪಟ್ಟಿವೆ. ದಾಳಿ ಮಾಡಿದ ತಂಡದಲ್ಲಿ 13 ನ್ಯಾಯಾಂಗ ಅಧಿಕಾರಿಗಳು, 7 ಪೊಲೀಸ್ ವರಿಷ್ಠಾಧಿಕಾರಿಗಳು, 19 Dy. ಪೊಲೀಸ್ ವರಿಷ್ಠಾಧಿಕಾರಿಗಳು, 26 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಇತರ ಹಲವಾರು ಪೊಲೀಸ್ ಸಿಬ್ಬಂದಿ ಮತ್ತು ಸಿಬ್ಬಂದಿಯನ್ನು ತಪಾಸಣೆಗೆ ನಿಯೋಜಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಮತ್ತು ಪೊಲೀಸ್ ಮಹಾನಿರೀಕ್ಷಕರು, ಕರ್ನಾಟಕ ಲೋಕಾಯುಕ್ತರು ಇದ್ದು, ಸಂಬಂಧಿಸಿದ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.


ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ , ಸಕಾಲ ಅರ್ಜಿಗಳು, ಖಾತೆ, ಕಂದಾಯ ಸೇರಿದಂತೆ ವಿವಿಧ ಬಗೆಯ ಅಧಿಕಾರಿಗಳ ಮೇಲೆ ಲಂಚದ ದೂರು ಬಂದ ಹಿನ್ನಲೆ ದಾಳಿ ನಡೆಸಿದ್ದು, ಮಹದೇವಪುರ ಮತ್ತು ಕೆಆರ್ ಪುರ ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸ್ರು , ಹಾಗು ಜುಡಿಷಿಯಲ್ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸುತ್ತಿದ್ದು, ಭಾರೀ ಹಗರಣಗಳು ಹೊರ ಬೀಳುವ ಸಾಧ್ಯತೆ ಇದೆ.