ಬೆಂಗಳೂರು: ಏನೇ ಅಸಮಧಾನ ಇರ್ಲಿ. ಪಕ್ಷದಲ್ಲಿ ಕೂತು ಮಾತನಾಡಿ. ಅದೂ ಆಗಲ್ಲ ಅಂದ್ರೆ ನೇರವಾಗಿ ಹೈಕಮಾಂಡ್ ನಾಯಕರ ಬಳಿಯೇ ದೂರು ನೀಡಿ. ಕ್ರಮ ತೆಗೆದ್ಕೊಳ್ತೇವೆ. ಅದು ಬಿಟ್ಟು ಮಾಧ್ಯಮಗಳ ಮುಂದೆ ಬೇಕಾಬಿಟ್ಟಿ ಹೇಳಿಕೆ ಕೊಡಂಗಿಲ್ಲ. ಲೋಕಸಭಾ ಚುನಾವಣೆ ಇದೆ. ಅದರತ್ತ ಗಮನ ನೀಡಿ ಎಂದು ಹೈಕಮಾಂಡ್ ರಾಜ್ಯದ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಬ್ಯಾಕ್ ಟು ಬ್ಯಾಕ್ ಮೀಟಿಂಗ್ ನಡೆಸಿದ್ರೂ ಯಾವ್ದೇ ಪ್ರಯೋಜನವಾಗಿಲ್ಲ. ಅಸಮಧಾನ ಭುಗಿಲೇಳುತ್ತಲೇ ಇದೆ.
ಸಚಿವ ಸ್ಥಾನ ಸಿಗದೇ ಇದ್ದದ್ದಕ್ಕೆ ನಿನ್ನೆ ಅಷ್ಟೇ ಯಲಬುರ್ಗದಲ್ಲಿ ನಡೆದ ಕಾರ್ಯಕ್ರಮದ ಬಹಿರಂಗ ವೇದಿಕೆಯಲ್ಲೇ ಮಾತನಾಡಿದ್ದ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ, ಅಡ್ವಾಣಿ ಬಿಜೆಪಿ ಕಟ್ಟಿ ಸತ್ತ. ಮೋದಿ ಪ್ರಧಾನಿ ಆಗ್ಬಿಟ್ಟ. ಜೆಡಿಎಸ್ ನಿಂದ ಬಂದ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದ. ನನ್ನ ಮುಂದೆ ನಿಲ್ಲೋಕು ಹೆದರ್ತಿದ್ದ ಹೆಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಆಗ್ಬಿಟ್ಟ. ಕಾಂಗ್ರೆಸ್ ನಿಂದ ಬಂದ ಮಂದಿ ಏನ್ ಮಾಡ್ಬೇಕು? ಇದೆಲ್ಲಾ ನಸೀಬು ಎಂದು ಏಕ ವಚನದಲ್ಲೇ ಮಾತನಾಡಿದ್ದರು. ಇದೀಗ ಮತ್ತೇ ಮಾಧ್ಯಮದ ಮುಂದೆ ಬಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನೀವು ಸೀನಿಯರ್ ಆದ್ರೂ ಮಂತ್ರಿ ಯಾಕೆ ಆಗ್ಲಿಲ್ಲ ಎಂದು ವೇದಿಕೆಯಲ್ಲಿದ್ದಾಗ ಪ್ರಶ್ನೆ ಮಾಡಿದರು. ಅದಕ್ಕೆ ಹಾಗೇ ಉತ್ತರಿಸಿದ್ದೆ. ಅದರಲ್ಲಿ ತಪ್ಪಾಗಿ ಏನ್ ಹೇಳಿಕೆ ಕೊಟ್ಟಿಲ್ಲ. ಕೆಲವೊಮ್ಮೆ ಅದೃಷ್ಟ ಕೈ ಹಿಡಿಯುತ್ತೆ. ಸಾಮಾಜಿಕ ನ್ಯಾಯದ ಆಧಾರದ ಮೇಲೆ, ಪ್ರಾದೇಶಿಕ ನ್ಯಾಯದ ಆಧಾರದ ಮೇಲೆ ಮಂತ್ರಿಗಳನ್ನ ಮಾಡ್ತಾರೆ. ಆದ್ರೆ, ಅನುಭವ ಇರವ್ರಿಗೆ ಅಧಿಕಾರ ಕೊಡ್ಬೇಕು ಅನ್ನೋದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಗಳು ಇನ್ಮೇಲೆ ಎಫಿಷಿಯನ್ಸಿ ಬಗ್ಗೆ ಹೆಚ್ಚು ಗಮನ ಕೊಡ್ಬೇಕು. ಪಾಪುಲೇಷನ್ ಗ್ರೋತ್ ಹೆಚ್ಚಾಗಿದೆ. ಸಮಸ್ಯೆ ಸಾಕಷ್ಟಿದೆ. ಗುಡ್ ಗವರ್ನೆನ್ಸ್ ಜಾರಿ ಆಗ್ಬೇಕಂದ್ರೆ ಅನುಭವ ಇರವ್ರಿಗೆ, ಹಾರ್ಡ್ ವರ್ಕರ್ ಗೆ ಮಣೆ ಹಾಕ್ಬೇಕಾಗುತ್ತೆ. ಹೀಗಾಗಿ ವರ್ಷಕ್ಕೆ ಒಮ್ಮೆ ಆದ್ರೂ ಸಚಿವರ ಮೌಲ್ಯಮಾಪನ ಮಾಡ್ಬೇಕು. ನಂಗೆ ಬೇರೆ ಪೋಸ್ಟ್ ಕೊಡೋಕೆ ರೆಡಿ ಇದ್ದಾರೆ. ಬಟ್ ನಂಗೆ ಇಂಟರೆಸ್ಟ್ ಇಲ್ಲ ಎಂದು ಖಾರವಾಗೇ ನುಡಿದರು.
ಅಸಮಧಾನದ ಕುರಿತು ಮಾತನಾಡಿದ ಅವರು, ಮಂತ್ರಿಗಳು ಸರಿ ಇಲ್ಲ ಅಂತಲ್ಲ. ಲ್ಯಾಕ್ ಆಫ್ ಅಂಡರ್ಸ್ಯಾಂಡಿಂಗ್ ಸಮಸ್ಯೆ ಇದೆ. ಆ ರೀತಿ ಫೀಲಿಂಗ್ ನಮ್ಮಲ್ಲಿ ಬಂದಿದೆ. ಕೆಲಸ ಮಾಡೋಕೆ ನಮಗೆ ಕಂಫರ್ಟ್ ಅನಿಸ್ತಿಲ್ಲ ಅನ್ನೋ ಭಾವನೆ ಇದೆ. ಶಾಸಕರು ಹಾಗೂ ಸಚಿವರ ನಡುವೆ ಹೆಚ್ಚಿನ ಸೌಹಾರ್ಧತೆ ಸಹಕಾರ ಬೇಕಾಗುತ್ತೆ ಎಂದು ಪಾಟೀಲ್ ಬರೆದ ಪತ್ರಕ್ಕೆ ನಾನೂ ಸಹಿ ಹಾಕಿದ್ದೆ. ನಮ್ಮಂತ ಹಿರಿಯ ನಾಯಕರಿಗೆ ಸಚಿವರ ಜೊತೆಗೆ ಹೋಗಿ ಮಾತಾಡೋದು ಕಷ್ಟ ಆಗ್ಬಹುದು. ಹೀಗಾಗಿ ಮುಖ್ಯಮಂತ್ರಿ ಗಳು ಕನಿಷ್ಠ ತಿಂಗಳಿಗೆ ಎರಡು ಬಾರಿ ಜಿಲ್ಲಾವಾರು ಶಾಸಕರ ಸಭೆ ನಡೆಸಿ, ಸಮಸ್ಯೆ ಆಲಿಸಬೇಕು ಎಂದು ತಿಳಿಸಿದ್ದೇವೆ. ಮುಖ್ಯಮಂತ್ರಿ ಗಳೂ ಇದಕ್ಕೆ ಒಪ್ಪಿದ್ದಾರೆ ಎಂದು ತಿಳಿಸಿದರು.




