NAMMA APP FOR TAXI AND AUTO: ಓಲಾ, ಉಬರ್ ರೀತಿಯಲ್ಲಿ ಶೀಘ್ರದಲ್ಲಿಯೇ ಅಟೋ, ಕ್ಯಾಬ್ ಗಳಿಗೆ ಸರ್ಕಾರದ ‘ನಮ್ಮ ಆ್ಯಪ್’

ಬೆಂಗಳೂರು : ಓಲಾ, ಉಬರ್ ನಂತಹ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾದ ರಾಜ್ಯ ಸರ್ಕಾರ, ನೋ ಲಾಸ್ ನೋ ಪ್ರಾಫಿಟ್ ರೀತಿಯಲ್ಲಿ ಹೊಸದೊಂದು ಆ್ಯಪ್ ಮಾಡಲು ಮುಂದಾಗಿದೆ.
ಸಾರಿಗೆ ಇಲಾಖೆಯಿಂದಲೇ ತಯಾರಾಗಲಿರುವ ಈ ಆ್ಯಪ್ ರಾಜ್ಯ ಸರ್ಕಾರದ್ದಾಗಿರುತ್ತದೆ, ಬೇರೆಯವರಿದೆ ಟೆಕ್ನಾಲಜಿ ಪಡೆದು ಸರ್ಕಾರವೇ ನಮ್ಮ ಆ್ಯಪ್ ಪ್ರಾರಂಭಿಸಲಿದೆ, ಇದು ಅಗ್ರಿಗೇಟರ್ ಕಂಪನಿಗಳಂತೆ ಕಾರ್ಯ ನಿರ್ವಹಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇನ್ನೆರಡು ತಿಂಗಳಲ್ಲಿ ನಮ್ಮ ಆ್ಯಪ್ ಲಾಂಚ್ ಮಾಡಲು ಚಿಂತನೆ ನಡೆಸಲಾಗಿದ್ದು, ಈಗಾಗಲೇ ಸಾರಿಗೆ ಇಲಾಖೆ ಆಯುಕ್ತರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಆಟೋ ಹಾಗೂ ಕ್ಯಾಬ್ ಚಾಲಕರ ಬೇಡಿಕೆ ಮೇರೆಗೆ ಆ್ಯಪ್ ರೆಡಿ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಆ್ಯಪ್ ಗೆ ಟೆಕ್ನಾಲಜಿ ರೆಡಿಯಾಗುತ್ತಿದೆ, ಈ ಹಿಂದೆ ಆಟೋ ಅಥವಾ ಟ್ಯಾಕ್ಸಿ ಸ್ಟಾಂಡ್ ಇರುತ್ತಿತ್ತು ಅಥವಾ ಲೋಕಲ್ ಪೋನ್ ಇರುತ್ತಿತ್ತು, ಪೋನ್ ಕರೆ ಬಂದಾಗ ಕರೆ ಬಂದ ಕಡೆ ಹೋಗುತ್ತಿದ್ದರು. ಈಗ ಓಲಾ ಉಬರ್ ಬಂದ ನಂತರ ಆ್ಯಪ್ ಮೂಲಕ ಎಲ್ಲೆಲ್ಲಿ ಕರೆ ಬರುತ್ತೆ ಅಲ್ಲಿಗೆ ಹೋಗಿ ಸೇವೆ ಒದಗಿಸುತ್ತಿದ್ದಾರೆ. ಅದರೆ ರೀತಿಯಲ್ಲಿ ನಮ್ಮ ಆ್ಯಪ್ ಕೂಡ ಸೇವೆ ಸಲ್ಲಿಸಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ನಮ್ಮ ಬಿಎಂಟಿಸಿ, ಕೆಎಸ್ಆರ್ಟಿಸಿಯಲ್ಲೂ ಆ್ಯಪ್ ಇದೆ, ಯಾವ ಬಸ್ಸು ಯಾವ ಸಮಯಕ್ಕೆ ಬರುತ್ತೆ, ಆ ಆ್ಯಪ್ ನಲ್ಲಿ ಎಲ್ಲ ಗೊತ್ತಾಗುತ್ತೆ, 4-5 ವರ್ಷದಿಂದ ಆಟೋದವರು ಸರ್ಕಾರದದಿಂದಲೇ ಒಂದು ಆ್ಯಪ್ ಮಾಡಿ ಅಂತ ಕೇಳುತ್ತಿದ್ದರು. ನಾನು ಕೂಡ ಸಭೆ ಕರೆದಾಗಲೂ ಸರ್ಕಾರವೇ ಒಂದು ಆ್ಯಪ್ ಮಾಡಿ, ನಮಗೆ ತೊಂದರೆಯಾಗುತ್ತಿದೆ ಅಂತ ಕೇಳಿದ್ದರು. ಆದ್ದರಿಂದ ಆ್ಯಪ್ ಮಾಡಲು ಒಪ್ಪಿಗೆ ಕೊಟ್ಟಿದ್ದೇನೆ ಎಂದರು.
ಈ ಹಿಂದೆ ನಮಗೆ ಒಂದು ಆ್ಯಪ್ ಮಾಡಿಕೊಟ್ಟಿದ್ದರು, ಆದರೆ ಅ್ಯಪ್ ನವರು ನಮ್ಮ ಬಳಿ ಇಷ್ಟು ಟೆಕ್ನಾಲಜಿ ಇಲ್ಲ ಅಂತಿದ್ದಾರೆ, ಆದ್ದರಿಂದ ಈಗ ಸರ್ಕಾರದಲ್ಲೆ ಇರುವಂತವರಿಗೆ ಆ್ಯಪ್ ಮಾಡಲು ಆಯುಕ್ತರಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.

ಆರ್ಗಿಗೇಟರ್ ಕಂಪನಿಗಳು ಹೆಚ್ಚು ಹಣ ಪಡೆಯುತ್ತಾರೆ, ಆದ್ರೆ ಸರ್ಕಾರದ ಆ್ಯಪ್ ನಲ್ಲಿ ಆ ರೀತಿ ತೆಗೆದುಕೊಳ್ಳಲ್ಲ, ಟೆಕ್ನಾಲಜಿ ಬೇರೆ ಅವರಿಂದ ಪಡೆಯುತ್ತೇವೆ, ಚಾಲಕರಿಗೆ ಸಹಾಯವಾಗುವಂತೆ ರೆಡಿಯಾಗಲಿದೆ ಸರ್ಕಾರದ ನಮ್ಮ ಆ್ಯಪ್, ಇಲ್ಲಿ ಪೀಕ್ ಅವರ್ ರೀತಿಯಲ್ಲಿ ಯಾವುದೇ ರೇಟ್ ನಿಗದಿಯಾಗಿಲ್ಲ, ಯಾವ ಟೈಂಲ್ಲಿ ವೆಹಿಕಲ್ ನಲ್ಲಿ ಓಡಾಟ ನಡೆಸಿದರೂ ಒಂದೇ ಚಾರ್ಜ್, ಸರ್ಕಾರದ ಆದೇಶದಂತೆ ಹಣ ಪಡೆಯಲು ಸೂಚಿಸಲಾಗುವುದು ಎಂದು ತಿಳಿಸಿದರು.

#OLA #UBER #TAXI #AUTO #RAMALINGAREDDY #MINISTERRAMALINGAREDDY #NAMMAAPP #TRANSPORTDEPARTMENT #TECHNOLOGY

More News